ಕಿನ್ನಿಗೋಳಿ: ಇಲ್ಲಿನ ತಾಳಿಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಕೆ ವಿಚಾರದಲ್ಲಿ ತಲೆದೋರಿದ್ದ ಸಮಸ್ಯೆ ಬಗ್ಗೆ ಸ್ಥಳಕ್ಕೆ ತೆರಳಿ ಮುಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಗೋಳಿಜೋರದ ಶ್ರೀರಾಮ ಮಂದಿರದಲ್ಲಿ ಈ ಕುರಿತು ಸಭೆ ನಡೆದು, ಸ್ಥಳೀಯರು ಖಾಸಗಿ ಕಂಪೆನಿಯೊಂದಕ್ಕೆ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಕೆ ಸಮಯದಲ್ಲಾದ ಲೋಪದೋಷಗಳ ಬಗ್ಗೆ ಶಾಸಕರ ಮುಂದೆ ಪ್ರಸ್ತಾಪಿಸಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಮೆಸ್ಕಾಂ ಅಧಿಕಾರಿಗೆ, ಸ್ಥಳೀಯರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವಂತೆ ಶಾಸಕರು ಸೂಚಿಸಿದರು.
ಅಲ್ಲದೇ ಸ್ಥಳೀಯರ ಅಹವಾಲು ಸಭೆ ಬಳಿಕ ಸಮಸ್ಯೆ ಕಂಡುಬಂದ ಸ್ಥಳಗಳಿಗೆ ಶಾಸಕರೇ ಖುದ್ದಾಗಿ ಮೆಸ್ಕಾಂ ಅಧಿಕಾರಿ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹೇಮಲತಾ, ಚಂದ್ರಶೇಖರ ಗೋಳಿಜೋರ, ಸ್ಥಳೀಯರಾದ ಶಂಕರ ಮಾಸ್ಟರ್, ರತ್ನಾಕರ ಸುವರ್ಣ, ಸಂತೋಷ್ ಶೆಟ್ಟಿಗಾರ್, ಸಂಜೀವ, ಯೋಗೀಶ್, ಮೋಹನ್, ಪ್ರಕಾಶ್ ಆಚಾರ್ಯ, ಭಾರತೀಯ ಜನತಾ ಪಾರ್ಟಿಯ ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಪ್ರಕಾಶ್ ಹೆಗ್ಡೆ, ಹೇಮಂತ್, ಕಪಿಲ, ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಮುಕುಂದ್ ಕಾಮತ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
Kshetra Samachara
30/11/2020 09:06 am