ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಂಗ್ರೆಸ್ ನಿಂದ ಬೀದಿಬದಿ ವ್ಯಾಪಾರಿಗಳಿಗೆ ತಳ್ಳುಗಾಡಿ ವಿತರಣೆ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ವತಿಯಿಂದ ಹತ್ತು ಮಂದಿ ಫಲಾನುಭವಿಗಳಿಗೆ ಬೀದಿಬದಿ ವ್ಯಾಪಾರಕ್ಕಾಗಿ ತಳ್ಳುಗಾಡಿ ವಿತರಿಸಲಾಯಿತು.

ಕಾಂಗ್ರೆಸ್ ಸದಸ್ಯ, ಪನಾಮಾ ಕಾರ್ಪೊರೇಷನ್ ಲಿ. ಸಿಇಒ ವಿವೇಕ್ ರಾಜ್ ಪೂಜಾರಿ ಉಚಿತವಾಗಿ ನೀಡಿದ ತಳ್ಳುಗಾಡಿಗಳನ್ನು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಸಮ್ಮುಖದಲ್ಲಿ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನ ಮುಂಭಾಗ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ವಿವೇಕ್ ರಾಜ್ ಪೂಜಾರಿ, ಕೋವಿಡ್ ನಿಂದ ಸಂಕಷ್ಟಕ್ಕೊಳಗಾದವರು ಪುನಃ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಯಾವುದೇ ಜಾತಿ, ಮತ ನೋಡದೆ ತಳ್ಳುಗಾಡಿ ವಿತರಿಸಲಾಗಿದೆ ಎಂದರು. ಈ ಸಂದರ್ಭ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವ-ನಿಧಿ ಅಡಿ ಸಿಗುವ 10 ಸಾವಿರ ರೂ. ಕಿರುಸಾಲವನ್ನೂ ಒದಗಿಸಿ ಕೊಡುವುದಾಗಿ ಫಲಾನುಭವಿಗಳಿಗೆ ಮುಖಂಡರು ಭರವಸೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

27/11/2020 09:19 pm

Cinque Terre

4.58 K

Cinque Terre

0

ಸಂಬಂಧಿತ ಸುದ್ದಿ