ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿಗೆ ಪಟ್ಟಣ ಪಂಚಾಯತ್ ಘೋಷಣೆ

ಮುಲ್ಕಿ: ಕಿನ್ನಿಗೋಳಿ, ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಒಳಗೊಂಡ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಘೋಷಣೆಯಾಗಿದೆ.

ಕಳೆದ ಕೆಲವರ್ಷಗಳ ಹಿಂದೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕಿನ್ನಿಗೋಳಿ, ಕಟೀಲು ಹಾಗೂ ಮೆನ್ನಬೆಟ್ಟು ಪಂಚಾಯತ್‌ಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಲ್ಲದೇ ಪಟ್ಟಣ ಪಂಚಾಯತ್ ಮೇಲ್ದರ್ಜೆಗೇರಿಸಲು 1 ಸಾವಿರ ಜನಸಂಖ್ಯೆ, ಪ್ರತಿ ಪಂಚಾಯಿತಿಗೆ 9 ಲಕ್ಷ ರೂ. ಆದಾಯ ಅಗತ್ಯವಾಗಿದ್ದು, ಶೇಕಡ 50 ಹೆಚ್ಚು ಕೃಷಿಯೇತರ ಆದಾಯ ಇರಬೇಕು ಎಂಬ ನಿಯಮವಿದೆ.

2011ರ ಜನಗಣತಿಯ ಪ್ರಕಾರ ಕಿನ್ನಿಗೋಳಿ ಗ್ರಾಮ ಪಂಚಾಯತಿ 8,526 ಜನಸಂಖ್ಯೆ ಹೊಂದಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯತಿ 4,372 ಜನಸಂಖ್ಯೆ ಹೊಂದಿದೆ. 2020ರಲ್ಲಿ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಜೊತೆ ಕಟೀಲು ಪಂಚಾಯತಿಯನ್ನು ಸೇರಿಸಿ ಪಟ್ಟಣ ಪಂಚಾಯತಿ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪಟ್ಟಣ ಪಂಚಾಯಿತಿಯಿಂದ ಅಭಿವೃದ್ಧಿಗೆ ಅವಕಾಶ, ಕಿನ್ನಿಗೋಳಿ-ಕಟೀಲು ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯನ್ನು ಸೇರಿಸಿ ಪಟ್ಟಣ ಪಂಚಾಯಿತಿ ಮಾಡುವ ಸರ್ಕಾರದ ಕ್ರಮದಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಲಿದ್ದು, ಸರ್ಕಾರದಿಂದ ಮತ್ತಷ್ಟು ಅನುದಾನಗಳು ಬರುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳ ಒಳಚರಂಡಿ ಅವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಕೃಷಿ ಅನುದಾನ ತಪ್ಪುವ ಸಾಧ್ಯತೆ:

ಕಿನ್ನಿಗೋಳಿ-ಕಟೀಲು ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಕೃಷಿಪ್ರಧಾನ ಪ್ರದೇಶಗಳಾಗಿದ್ದು ಪಟ್ಟಣ ಪಂಚಾಯಿತಿ ಆದರೆ ಕೃಷಿಗೆ ಅನುದಾನ ತಪ್ಪುವ ಸಾಧ್ಯತೆಗಳಿವೆ ಅದರಲ್ಲೂ ಮುಖ್ಯವಾಗಿ ಉದ್ಯೋಗ ಖಾತರಿ ಯೋಜನೆಗೆ ಬ್ರೇಕ್ ಬೀಳಲಿದೆ.

ಪಟ್ಟಣ ಪಂಚಾಯತಿ ಅಭಿನಂದನೆ: ಕಿನ್ನಿಗೋಳಿ, ಕಟೀಲು ಹಾಗೂ ಮೆನ್ನಬೆಟ್ಟು ಗ್ರಾಮಗಳನ್ನು ಸೇರಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮಾಡಿದ ಶಾಸಕ ಉಮಾನಾಥ ಕೋಟ್ಯಾನ್ ರವರನ್ನು ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ನಿದ್ದೊಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಅಭಿನಂದಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

18/11/2020 02:02 pm

Cinque Terre

4.78 K

Cinque Terre

0

ಸಂಬಂಧಿತ ಸುದ್ದಿ