ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇರಾ: ಬಾಳೆಪುಣಿ ಶಾಲಾ ಕಿರುಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ಯು.ಟಿ.ಖಾದರ್

ಬಂಟ್ವಾಳ: ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದ ಇರಾ ಗ್ರಾಮದ ಬಾಳೆಪುಣಿ ಕುದುಂಬುವಳಚ್ಚಿಲ್ ಎಂಬಲ್ಲಿ ತಮ್ಮ ಶಿಫಾರಸ್ಸಿನ ಮೂಲಕ ಪಿಡಬ್ಲ್ಯುಡಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿದ 15 ಲಕ್ಷ ರೂ. ಅಂದಾಜು ಮೊತ್ತದ ಶಾಲಾ ಕಿರುಸೇತುವೆ ಕಾಮಗಾರಿಯನ್ನು ಶಾಸಕ ಯು. ಟಿ. ಖಾದರ್ ಅವರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶನಿವಾರ ಪರಿಶೀಲಿಸಿದರು.

ಸ್ಥಳೀಯ ಗ್ರಾಮಸ್ಥರು ಈ ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದಾಗ ಶಾಸಕರು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದರು.

ಇರಾ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ವರ್ಕಾಡಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಮಜೀದ್ ಪಿ.ಬಿ.,ಇರಾ ಗ್ರಾಪಂ ನಿಕಟಪೂರ್ವ ಸದಸ್ಯರಾದ ಎಂ. ಬಿ. ಉಮ್ಮರ್, ಮೊಯ್ದುಕುಂಞ , ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಹಸೈನಾರ್, ಸ್ಥಳೀಯ ಗಣ್ಯರಾದ ಸತ್ತಾರ್ ಬಾಳೆಪುಣಿ, ಮೊಹಮ್ಮದ್ ಹಾಜಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

08/11/2020 10:51 am

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ