ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಪುರಸಭೆ: ಎಸ್.ಡಿ.ಪಿ.ಐ. ಬೆಂಬಲದೊಂದಿಗೆ ಕಾಂಗ್ರೆಸ್ ಗೆ ಅಧಿಕಾರ; ಅಧ್ಯಕ್ಷರಾಗಿ ಮಹಮ್ಮದ್ ಶರೀಫ್, ಉಪಾಧ್ಯಕ್ಷರಾಗಿ ಜೆಸಿಂತಾ

ಬಂಟ್ವಾಳ: ಬಂಟ್ವಾಳ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಮತ್ತು ಉಪಾಧ್ಯಕ್ಷರಾಗಿ ಜೆಸಿಂತಾ ಡಿಸೋಜ ಅಯ್ಕೆಯಾಗಿದ್ದಾರೆ.

ಕೊನೆ ಕ್ಷಣದಲ್ಲಿ ಎಸ್.ಡಿ.ಪಿ.ಐ. ಕಾಂಗ್ರೆಸ್ ಗೆ ಬೆಂಬಲ ಸೂಚಕವಾಗಿ ತನ್ನ ಅಭ್ಯರ್ಥಿಯನ್ನು ಹಿಂಪಡೆದಿದ್ದು, ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿತು.

ಶನಿವಾರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಾಗ, ಬಿಜೆಪಿಯ ಗೋವಿಂದ ಪ್ರಭು ಮತ್ತು ಎಸ್.ಡಿ.ಪಿ.ಐ.ನ ಮುನೀಶ್ ಆಲಿ ಅಧ್ಯಕ್ಷ ಸ್ಥಾನಕ್ಕೆ, ಮೀನಾಕ್ಷಿ ಗೌಡ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೂ ನಾಮಪತ್ರ ಸಲ್ಲಿಸಲು ಬೆಳಗ್ಗೆ 10.30ಕ್ಕೆ ಕೊನೆ ಗಳಿಗೆವರೆಗೂ ಕಾಂಗ್ರೆಸ್ ಕಚೇರಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಮಾಲೋಚನೆ ನಡೆದಿತ್ತು.

ಅಂತಿಮವಾಗಿ ಕಾಂಗ್ರೆಸ್ ನಿಂದ ಮಹಮ್ಮದ್ ಶರೀಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜೆಸಿಂತಾ ಡಿಸೋಜ ನಾಮಪತ್ರ ಸಲ್ಲಿಸಿದರು.

ಬಳಿಕ ನಡೆದ ಬೆಳವಣಿಯಲ್ಲಿ ಎಸ್.ಡಿ.ಪಿ.ಐ.ನ ಮುನೀಶ್ ಆಲಿ ನಾಮಪತ್ರ ಹಿಂತೆಗೆದರು. ಕಾಂಗ್ರೆಸ್ ಪರವಾಗಿ 16, ಬಿಜೆಪಿ ಪರವಾಗಿ 13 ಮತಗಳು ಚಲಾವಣೆಯಾದವು.

2018, ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿತ್ತು. 27 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿದ್ದವು.

Edited By : Nirmala Aralikatti
Kshetra Samachara

Kshetra Samachara

07/11/2020 03:25 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ