ಮುಲ್ಕಿ: ದ.ಕ. ಜಿಪಂ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಮುದಾಯ ತುಮಕೂರು ಸಹಯೋಗದೊಂದಿಗೆ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ವಿಶೇಷ ಗ್ರಾಮಸಭೆ ಮತ್ತು ಸ್ವ ಸಹಾಯ ಸಂಘಗಳ ಜಾಥಾ ಕಿಲ್ಪಾಡಿ ಗ್ರಾಪಂನಲ್ಲಿ ಜರುಗಿತು.
ಐಇಸಿ ಮತ್ತು ಹೆಚ್.ಆರ್.ಡಿ. ಚಟುವಟಿಕೆ ಕುರಿತು ಜೆಜೆಎಮ್ ದ.ಕ. ಜಿಲ್ಲಾ ಯೋಜನಾಧಿಕಾರಿ ಪ್ರಸಾದ್ ಮಾಹಿತಿ ನೀಡಿದರು. ಗ್ರಾಪಂ ಆಡಳಿತಾಧಿಕಾರಿ ರಾಜಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.
ಪಿಡಿಒ ನಿರೂಪಿಸಿದರು. ಸಮುದಾಯ ಸಂಸ್ಥೆ ಐಇಸಿ ಮಹಾಂತೇಶ್ ಹಿರೇಮಠ್ , ಆಶಾ ಕಾರ್ಯಕರ್ತೆಯರು,ಅಂಗನವಾಡಿ ಸಹಾಯಕಿಯರು, ಸಮುದಾಯ ಸಂಸ್ಥೆ ಸದಸ್ಯರು, ಗ್ರಾಮಸ್ಥರು, ಪಂ. ಸಿಬ್ಬಂದಿ ಭಾಗವಹಿಸಿದ್ದರು.
"ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ, ರಾಜ್ಯದಲ್ಲಿ ಮನೆಮನೆಗೆ ಗಂಗೆ ನಾಮಾಂಕಿತ ಯೋಜನೆ, 2024ರ ಹೊತ್ತಿಗೆ ಯೋಜನೆಯ ಯಶಸ್ವಿ ಅನುಷ್ಠಾನದ ಗುರಿ.
ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ಪೂರೈಕೆ ಉದ್ದೇಶವಾಗಿದೆ."
Kshetra Samachara
03/11/2020 09:00 am