ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ತೆರಳಿ ಗಮನ ಸೆಳೆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಡೇಶಿವಾಲಯ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಟೋದಲ್ಲಿ ತೆರಳುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗಮನ ಸೆಳೆದರು.

ಭಾನುವಾರ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಬಳಿಕ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸಕ್ಕೆ ಶಾಸಕರು ತೆರಳುವ ಸಂದರ್ಭ ಶಾಸಕರ ಶಿಫಾರಸು ಮೇರೆಗೆ ಸ್ವಯಂ ಉದ್ಯೋಗದ ಯೋಜನೆಯಡಿ ಆಟೋರಿಕ್ಷಾ ಸೌಲಭ್ಯ ಪಡೆದ ಮೋಹನ್ ನಾಯ್ಕ್ ಅವರು ಶಾಸಕರಿಗೆ ತನ್ನ ಆಟೋರಿಕ್ಷಾ ತೋರಿಸಿದರು. ಇದನ್ನು ನೋಡಿದ ಬಳಿಕ ಶಾಸಕರು ರಿಕ್ಷಾದಲ್ಲಿ ಕುಳಿತು ಮುಂದಿನ ಶಿಲಾನ್ಯಾಸ ಕಾಮಗಾರಿಗಳಿಗೆ ತೆರಳಿದ್ದು, ಜನರ ಗಮನ ಸೆಳೆಯಿತು.

ಇದೇ ವೇಳೆ ರಾಜೇಶ್ ನಾಯ್ಕ್ 1ಕೋಟಿ 70 ಲಕ್ಷ ವೆಚ್ಚದ ವಿವಿಧ ಕಾಮಗಾರಿ ಗಳನ್ನು ಉದ್ಘಾಟಿಸಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ಕೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕಾರ್ಕಳ, ಗೋಳ್ತಮಜಲು ಮಹಾಶಕ್ತಿಕೇಂದ್ರದ ಅಧ್ಯಕ್ಷ ರಮನಾಥ ರಾಯಿ, ಕ್ಷೇತ್ರದ ಗ್ರಾಪಂ ಚುನಾವಣಾ ಸಹಪ್ರಭಾರಿ ಪ್ರಭಾಕರ ಪ್ರಭು, ಗ್ರಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ ಮತ್ತಿತರರು ಇದ್ದರು.

Edited By : Vijay Kumar
Kshetra Samachara

Kshetra Samachara

01/11/2020 08:29 pm

Cinque Terre

5.28 K

Cinque Terre

2

ಸಂಬಂಧಿತ ಸುದ್ದಿ