ಮುಲ್ಕಿ: ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ಕುಪ್ಪೆಪದವು ಶಕ್ತಿಕೇಂದ್ರದ ಕಿಲೆಂಜಾರು ಪಡೀಲ್ ಪದವು ಎಂಬಲ್ಲಿ ಕೊರಗ ಸಮುದಾಯದ ಎರಡು ಮನೆಗಳಿಗೆ ತನ್ನ ಖರ್ಚಿನಿಂದಲೇ ವಿದ್ಯುತ್ತೀಕರಣದ ವೆಚ್ಚ ಭರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ ಮುತ್ತೂರು, ಮಂಡಲ ಕಾರ್ಯದರ್ಶಿ ಹಾಗೂ ಅಕ್ರಮ-ಸಕ್ರಮ ಸಮಿತಿ ಸದಸ್ಯ ಗಣೇಶ್ ಪಾಕಜೆ, ಶಕ್ತಿಕೇಂದ್ರ ಅಧ್ಯಕ್ಷರ ಜಗದೀಶ್ ಕುಲಾಲ್ ಪಾಕಜೆ, ಮಹಾಶಕ್ತಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಸಾದ್ ಎಂ. ಎಡಪದವು, ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ಅಶೋಕ್ ನಾಯ್ಕ ಮುಚ್ಚೂರು, ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಯ್ಕ್, ಶಕ್ತಿಕೇಂದ್ರ ಸಹ ಪ್ರಭಾರಿ ಶಿವರಾಮ್ ಶೆಟ್ಟಿ ಉಳಿಪಾಡಿ, ಅಶೋಕ್ ಕಟ್ಟೆಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/10/2020 06:12 pm