ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಕರ್ನಾಟಕದ ಮುಖ್ಯಮಂತ್ರಿಯಾಗಿ ನೋಡುವುದೇ ನನ್ನ ಗುರಿ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದ್ದಾರೆ.
ಮಾಧ್ಯಮ ಸಂದರ್ಶನವೊಂದಲ್ಲಿ ಮಾತನಾಡಿದ ಅವರು, 'ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದರೆ ಸಂತೋಷ. ಚುನಾವಣೆಯಲ್ಲಿ ಸೋತ ನಂತರ ಹಲವಾರು ಅಂಶಗಳನ್ನು ವಿಮರ್ಶಿಸಿದ್ದೇನೆ. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಈವರೆಗೂ ಯಾರಿಗೂ 5 ಲಕ್ಷ ಮತ ಲಭಿಸಿರಲಿಕ್ಕಿಲ್ಲ. ನನಗೆ ಲಭಿಸಿದೆ. ಅದು ಜನರು ನಮ್ಮನ್ನು ನಂಬುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ನಾವು ಅಪಪ್ರಚಾರದ ಅಲೆಯಲ್ಲಿ ಸಿಲುಕಿ ಬಿದ್ದಿದ್ದೇವೆ' ಎಂದು ಹೇಳಿದರು.
Kshetra Samachara
22/10/2020 11:59 pm