ಬಂಟ್ವಾಳ: ತಾಲೂಕಿನ ಪ್ರತಿ ಗ್ರಾಪಂ ಗಳ ಪ್ರಗತಿ ಪರಿಶೀಲನೆ ನಡೆಸಿ ಅಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆಯುವ ಕಾರ್ಯಕ್ರಮದ ಭಾಗವಾಗಿ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ನೇತೃತ್ವದಲ್ಲಿ ಅಧಿಕಾರಿಗಳ ಗ್ರಾಪಂ ಭೇಟಿ ಕಾರ್ಯಕ್ರಮಕ್ಕೆ ಕಾವಳಪಡೂರು ಗ್ರಾಪಂನಲ್ಲಿ ಚಾಲನೆ ನೀಡಲಾಯಿತು.
ತಾಲೂಕಿನ ಪ್ರತಿ ಗ್ರಾಪಂಗಳಿಗೆ ಇಂದಿನಿಂದ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆಗಾಗಿ ತಾಪಂ ಅಧ್ಯಕ್ಷ ರ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಾರ್ವಜನಿಕರ ಸೂಕ್ತ ಸಲಹೆ ಸೂಚನೆ ಪಡೆದು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ಇ.ಒ.ರಾಜಣ್ಣ, ಇಂಜಿನಿಯರ್ ಕೃಷ್ಣ, ಕಾವಳಪಡೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಮೋದ್ ರೈ ಕಾಡಬೆಟ್ಟು, ಗ್ರಾಪಂ ಪಿ.ಡಿ.ಒ. ಹಾಗೂ ಸದಸ್ಯರು ಹಾಜರಿದ್ದರು.
Kshetra Samachara
14/10/2020 10:31 am