ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅ.8ರಂದು ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಬಂಟ್ವಾಳ ಕ್ಷೇತ್ರದ 73 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದಲ್ಲಿ ನಿರಂತರವಾಗಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ 95 ಶೇ. ವಿತರಣೆ ಪೂರ್ಣಗೊಂಡಿದೆ. ಮನೆ ಇದ್ದರೂ, ಹಕ್ಕುಪತ್ರ ಇಲ್ಲದೇ ಇದ್ದಾಗ ಸರಕಾರಿ ಸೌಲಭ್ಯ ಹಾಗೂ ಬ್ಯಾಂಕ್ ಸಾಲ ಪಡೆಯುವುದು ಕಷ್ಟವಾಗಿದ್ದು, ಹಕ್ಕುಪತ್ರ ಸಿಕ್ಕಿದಾಗ ದಾಖಲೆಯ ಜತೆ ಸೌಲಭ್ಯಗಳನ್ನೂ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ಯಶವಂತ ಪೊಳಲಿ, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು, ದಿವಾಕರ ಮುಗುಳಿಯ, ಗ್ರಾಮ ಕರಣಿಕರಾದ ಜನಾರ್ದನ ಜೆ, ರಾಜು, ಪ್ರಶಾಂತ್, ಕರಿಬಸಪ್ಪ, ವೈಶಾಲಿ, ಶಿಲ್ಪಾ, ಅನಿಲ್, ಆಶಾ ಮೆಹಂದಲೆ, ಲಿಂಗಪ್ಪ ಜಜ್ಲುಂಬಿ ಉಪಸ್ಥಿತರಿದ್ದರು.
Kshetra Samachara
08/10/2020 03:51 pm