ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಮಂಗಳೂರು ತೋಟಗಾರಿಕಾ ಇಲಾಖೆಯಿಂದ ನಡೆದ ಜೇನು ಕೃಷಿ ತರಬೇತಿಯ ಮುಂದುವರಿದ ಭಾಗವಾಗಿ ಪ್ರಾತ್ಯಕ್ಷಿಕೆ ಕಾರ್ಯಾಗಾರ ಪುತ್ತೂರು ಬೆಟ್ಟಂಪಾಡಿ ಇರ್ದೆಯ ಜೇನುಕೃಷಿ ಸಾಧಕ ಮನಮೋಹನ ಅವರ ಕ್ಷೇತ್ರದಲ್ಲಿ ನಡೆಯಿತು.
ಜೇನು ಸಾಕಾಣಿಕೆ, ಮೇಣ ತಯಾರಿಕೆ, ಜೇನು ಪಾಲು ಮಾಡುವುದು, ಜೇನು ಹುಳಗಳ ಕುಟುಂಬ, ಜೇನುಹುಳಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಯನ್ನು ಜೇನುಕೃಷಿಯಲ್ಲಿ ಸಾಧಕರಾದ ಮನಮೋಹನ ಹಾಗೂ ರಾಧಾಕೃಷ್ಣ ನೀಡಿದರು.
ಮಂಗಳೂರು ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ ಹಾಗೂ ಜೇನು ಅನುವುಗಾರ ಪ್ರವೀಣ ಉಪಸ್ಥಿತರಿದ್ದರು. ಸುಮಾರು 88 ಮಂದಿ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ಭಾಗವಹಿಸಿದ್ದರು.
Kshetra Samachara
03/10/2021 07:49 pm