ಬಜಪೆ: ಬಜಪೆ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಪ್ರಕಾಶ್ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಸಂದೇಶ್ ಪಿ.ಜಿ. ಅವರ ವರ್ಗಾವಣೆಯಿಂದ ಈ ಸ್ಥಾನ ತೆರವಾಗಿತ್ತು.
ರಾಷ್ಟ್ರಮಟ್ಟದ ವಾಲಿಬಾಲ್ ಪಟುವಾಗಿರುವ ಪ್ರಕಾಶ್ ಅವರು ಪ್ರಶಸ್ತಿ ವಿಜೇತ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕ್ರೀಡಾ ಸಾಧನೆಯಿಂದಲೇ ರೈಲ್ವೆ ಇಲಾಖೆಯನ್ನು ಸೇರಿದ್ದರು. ಬಳಿಕ ಸೇನೆಯಲ್ಲಿ ಆರು ತಿಂಗಳು ಸೇವೆಸಲ್ಲಿಸಿ, ಬಳಿಕ ಪೊಲೀಸ್ ಇಲಾಖೆಗೆ ನೇಮಕಾತಿ ಪಡೆದುಕೊಂಡರು.
ಮೆಸ್ಕಾಂ, ಉಳ್ಳಾಲ ಠಾಣೆ, ಮಂಗಳೂರು ಟ್ರಾಫಿಕ್, ಕಾರವಾರ ಹಾಗೂ ಕುದುರೆಮುಖ ಸೇರಿದಂತೆ ಹನ್ನೊಂದು ವರ್ಷ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಪದೋನ್ನತಿ ಪಡೆದುಕೊಂಡರು. ಬಳಿಕ ರಾಮನಗರ ಎಸಿಬಿಯಲ್ಲಿಯೂ 3 ವರ್ಷ ಕರ್ತವ್ಯ ನಿರ್ವಹಿಸಿದ್ದರು. ನಂತರ ಸಿದ್ಧಾಪುರದಲ್ಲಿ ಸೇವೆ ಸಲ್ಲಿಸಿ ತಮ್ಮ ಹುಟ್ಟೂರಿನ ಕಾಪುನಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದರು.
Kshetra Samachara
18/07/2022 08:47 pm