ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ರಾಘವೇಶ್ವರ ಶ್ರೀಗಳ ಭೇಟಿ: ಬದ್ಧತೆ ಇರುವ ಶಾಸಕರೆಂದು ಶುಭ ಹಾರೈಸಿದ ಶ್ರೀಗಳು

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಶ್ರೀಗಳು ಕರ್ತವ್ಯದಲ್ಲಿ ಬದ್ಧತೆ ಇರುವ ಶಾಸಕರು ಎಂದು ಆಶೀರ್ವದಿಸಿದರು. ಈ ಸಂದರ್ಭ ಪ್ರಮುಖರಾದ ಹಾರಕೆರೆ ನಾರಾಯಣ ಭಟ್, ರಾಜಾರಾಮ ಭಟ್ ಟಿ.ಜಿ, ರಾಜಾರಾಮ ಕಾಡೂರು ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಅವರ ಅನುದಾನದಿಂದ ಪೆರಾಜೆ ಮಠ ಸಂಪರ್ಕಿಸುವ ರಸ್ತೆ ಅಭಿವೃದ್ಧಿಯಾಗುತ್ತಿರುವ ವಿಚಾರವನ್ನು ಹಾರಕೆರೆ ನಾರಾಯಣ ಭಟ್ ಗಮನ ಸೆಳೆದರು. ಬದ್ಧತೆ ಇರುವ ಶಾಸಕರಿಂದಷ್ಟೇ ಈ ಕೆಲಸ ಸಾಧ್ಯ ಎಂದು ಶ್ಲಾಘಿಸಿದ ಶ್ರೀಗಳು ಅವರನ್ನು ಆಶೀರ್ವದಿಸಿದರು.

Edited By : PublicNext Desk
Kshetra Samachara

Kshetra Samachara

27/05/2022 11:01 am

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ