ಬಂಟ್ವಾಳ: ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ರಾತ್ರಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದನ್ನು ಬಿ.ಸಿ.ರೋಡ್ ನ ಗಜಲಕ್ಷ್ಮೀ ಕ್ರೇನ್ ಮೂಲಕ ಬದಿಗೆ ಸರಿಸಿ, ಸಂಚಾರಕ್ಕೆ ಅನುವು ಮಾಡಲಾಗಿದೆ.
ರಾತ್ರಿ ಸುಮಾರು 8ರ ವೇಳೆ ಹಳೆಯ ಮರವೊಂದು ಉರುಳಿ ಬಿದ್ದ ಪರಿಣಾಮ ನರಿಕೊಂಬು ಪಾಣೆಮಂಗಳೂರು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೂಡಲೇ ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ಸಹಾಯದಿಂದ ಮರವನ್ನು ಬದಿಗೆ ಸರಿಸುವ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Kshetra Samachara
17/05/2022 08:59 pm