ಬಂಟ್ವಾಳ: ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳಿಂದ ಕ್ರೈಸ್ತ ಸಮುದಾಯ ವಂಚಿತರಾಗುತ್ತಿದ್ದು, ಸಂಸ್ಥೆಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಇವುಗಳನ್ನು ಖಂಡಿಸುವ ಸಲುವಾಗಿ ಬಿ.ಸಿ.ರೋಡಿನ ಬೈಪಾಸ್ ಬಳಿ ಇರುವ ಮೈದಾನದಲ್ಲಿ ಮೊಗರ್ನಾಡ್ ವಲಯ ಕ್ರೈಸ್ತ ಸಮುದಾಯದಿಂದ ಮಾನವ ಸರಪಳಿ ಸಹಿತ ಪ್ರತಿಭಟನೆ ಬುಧವಾರ ಮಧ್ಯಾಹ್ನ ನಡೆಯಿತು.
ಈ ಸಂದರ್ಭ ಮಂಗಳೂರು ಧರ್ಮಪ್ರಾಂತ್ಯ ಕೆಥೋಲಿಕ್ ಸಭಾ ಅಧ್ಯಕ್ಷ ಸ್ಟ್ಯಾನಿ ಲೋಬೊ ಮಾತನಾಡಿ, ಕ್ರೈಸ್ತರು ಸುಮ್ಮನಿದ್ದಾರೆ ಎಂದು ದಬ್ಬಾಳಿಕೆ ಮಾಡಲಾಗುತ್ತದೆ. ನಮ್ಮ ಮಂದಿರಗಳನ್ನು ಕೆಡಹಲಾಗುತ್ತಿದೆ, ನಿರಂತರವಾಗಿ ಹಲ್ಲೆ ದೌರ್ಜನ್ಯಗಳು ನಡೆಯುತ್ತಿವೆ, ಮತಾಂತರ ನಿಷೇಧ ಕಾಯ್ದೆ ಪ್ರಸ್ತಾಪ ಸಂದರ್ಭ ಕ್ರೈಸ್ತರನ್ನು ಬೊಟ್ಟು ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಇಲಾಖೆಗಳು ಸಮುದಾಯಕ್ಕೆ ರಕ್ಷಣೆ ನೀಡಬೇಕಿದೆ ಎಂದರು.
ಕಾರ್ಯದರ್ಶಿ ಆಲ್ಫೋನ್ಸ್ ಫೆರ್ನಾಂಡೀಸ್, ಪ್ರಮುಖರಾದ ವಂ.ವಲೇರಿಯನ್ ಡಿಸೋಜ, ವಂ.ಪೀಟರ್ ಡಿಸೋಜ, ವಂ.ಫೆಡ್ರಿಕ್ ಮೊಂತೇರೊ, ವಂ.ಐವನ್ ಪೀಟರ್ ಡಿಮೆಲ್ಲೊ, ವಂ.ಪ್ಯಾಟ್ರಿಕ್ ಸಿಕ್ವೇರ, ವಂ. ಜೋನ್ ಪ್ರಕಾಶ್ ಪಿರೇರ, ವಂ.ಗ್ರೇಶನ್ ಅಲ್ವಾರಿಸ್, ವಂ.ಫ್ರಾನ್ಸಿಸ್ ಕ್ರಾಸ್ತ, ವಂ.ಲಿಯೋ ಲೋಬೊ, ವಂ.ಆಲ್ವಿನ್ ಡಿಕುನ್ಹ, ವಂ.ಡಾ. ಮಾರ್ಕ್ ಕ್ಯಾಸ್ತೆಲಿನೊ, ವಂ.ಐವನ್ ಮೈಕಲ್ ರೋಡ್ರಿಗಸ್, ವಂ.ಪಾವ್ಲ್ ಪ್ರಕಾಶ್ ಡೊಸೋಜ, ವಂ.ವಿಶಾಲ್ ಮೆಲ್ವಿನ್ ಮೊನಿಸ್, ವಂ.ಸುನಿಲ್ ಪ್ರವೀಣ್ ಪಿಂಟೊ, ವಂ.ಗ್ರೆಗೊರಿ ಪಿರೇರ, ವಂ.ಹೆನ್ರಿ ಡಿಸೋಜ, ವಂ.ಸಂತೋಷ್ ಡಿಸೋಜ, ವಂ.ತ್ರಿಶಾನ್, ಮಂಗಳೂರು ಧರ್ಮಪ್ರಾಂತ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕೇಸ್ಟಲಿನೋ ಉಪಸ್ಥಿತರಿದ್ದರು. ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್ ಅವರು ಘೋಷವಾಕ್ಯಗಳನ್ನು ಉದ್ಘೋಷಿಸಿದ ಸಂದರ್ಭ, ಸಭೆ ಒಕ್ಕೊರಳಿನಿಂದ ಮಾರ್ದನಿಸಿತು. ಧರ್ಮ ಭಗಿನಿಯರು, ಕ್ರೈಸ್ತ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಳಿಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ವಾಲ್ಟರ್ ನೊರೊನ್ಹ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
02/03/2022 06:37 pm