ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮದ ಅಭಿವೃದ್ಧಿಯಲ್ಲಿ ಯುವಕ ಮತ್ತು ಯುವತಿ ಮಂಡಲಗಳ ಪಾತ್ರ ಮಹತ್ವದ್ದಾಗಿದೆ - ಹರಿಕೇಶ್ ಶೆಟ್ಟಿ

ಬಜಪೆ : ಗ್ರಾಮದ ಅಭಿವೃದ್ಧಿಯಲ್ಲಿ ಯುವಕ ಮತ್ತು ಯುವತಿ ಮಂಡಲಗಳ ಪಾತ್ರ ಮಹತ್ವದ್ದಾಗಿದ್ದು, ಪಂಚಾಯತ್ ಅರ್ಥಾತ್ ಗ್ರಾಮಗಳ ಅಭಿವೃದ್ಧಿ ಕಾರ್ಯಗಳಲ್ಲಿ ಯುವಕ-ಯುವತಿ ಮಂಡಲಗಳು ಕೈಜೋಡಿಸಬೇಕು ಎಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಹೇಳಿದರು.

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ವಿಶೇಷ ಯುವ ಗ್ರಾಮಸಭೆ ಹಾಗೂ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಯುವಕ ಮತ್ತು ಯುವತಿ ಮಂಡಲಗಳ ಸದಸ್ಯರಿಗೆ ನೆಹರೂ ಯುವ ಕೇಂದ್ರದ ತಾಲೂಕು ಸಂಯೋಜಕ ನಿತಿನ್ ಮಾಹಿತಿ ನೀಡಿದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ರತ್ನಾ ಎಸ್, ಸದಸ್ಯರಾದ ದಿನೇಶ್ ಕುಮಾರ್, ವಿಶ್ವನಾಥ ಶೆಟ್ಟಿ, ಮೊಹಮ್ಮದ್ ಅಝರುದ್ಧಿನ್, ಸೈನಾಝ್, ಆರೋಗ್ಯ ಸಹಾಯಕಿ ನಿಖಿತಾ, ಅಂಗನವಾಡಿ ಕಾರ್ಯಕರ್ತೆಯರು, ಯುವಕ-ಯುವತಿ ಮಂಡಲಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ರಾಮಪ್ಪ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

11/01/2022 07:33 pm

Cinque Terre

290

Cinque Terre

0

ಸಂಬಂಧಿತ ಸುದ್ದಿ