ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ , ಬುಧವಾರ ಕಲ್ಲಡ್ಕ ಮೂಲಕ ಹಾದುಹೋಗುವ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ನೇತೃತ್ವದಲ್ಲಿ ಅವರನ್ನು ಸ್ವಾಗತಿಸಲಾಯಿತು. ಇದೇ ವೇಳೆ ಕಲ್ಲಡ್ಕದ ಪ್ರಸಿದ್ಧ ಕೆ.ಟಿ.ಯನ್ನು ಸಚಿವರು ಸವಿದರು. ಸಚಿವ ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್, ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ಕ. ಕೃಷ್ಣಪ್ಪ, ದಿನೇಶ್ ಅಮ್ಟೂರು, ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ, ಜಯಂತ್ ಗೌಡ, ಸುಜಿತ್ ಕೊಟ್ಟಾರಿ, ದೀರಜ್ ಆಚಾರ್ಯ, ಅಜಿತ್ ಕುಮಾರ್, ಹೋಟೆಲ್ ಮಾಲಕರಾದ ರಾಜೇಂದ್ರ ಹೊಳ್ಳ ದಂಪತಿ ಉಪಸ್ಥಿತರಿದ್ದರು.
Kshetra Samachara
18/08/2021 07:30 pm