ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಡಂಕಾಪು ಕಾರ್ಮೆಲ್ ಪದವಿ ಕಾಲೇಜಿಗೆ ಒಂದು ಜಿಲ್ಲೆ ಒಂದು ಹಸಿರು ಚಾಂಪಿಯನ್ ಪ್ರಶಸ್ತಿ ಪ್ರದಾನ

ಬಂಟ್ವಾಳ: ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ ಮಂಡಳಿಯು ಆಯೋಜಿಸಿದ ಒಂದು ಜಿಲ್ಲೆ ಒಂದು ಹಸಿರು ಚಾಂಪಿಯನ್" (ಒನ್ ಡಿಸ್ಟ್ರಿಕ್ಟ್ ಒನ್ ಗ್ರೀನ್ ಚಾಂಪಿಯನ್) ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನ ಕಾರ್ಮೆಲ್ ಕಾಲೇಜ್ ಮೊಡಂಕಾಪಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರಾದ ರಾಜೇಂದ್ರ ಕೆ. ವಿ ಪ್ರಧಾನ ಮಾಡಿದ್ದಾರೆ. ಕಾಲೇಜಿನ ಸ್ವಚ್ಛತಾ ಕ್ರಿಯಾ ಯೋಜನೆ 2020 21 (ಎಸ್.ಎ.ಪಿ) ಸಮಿತಿಯು "ಸ್ವಚ್ಛತಾ ಶಿಕ್ಷಣ ಹಾಗೂ ಅಭ್ಯಾಸ"ಕ್ಕೆ ನೀಡಿದ ಮಹತ್ವದ ಕೊಡುಗೆ ಯನ್ನು .ಶ್ಲಾಘಿಸಿದರು ಹಾಗೂ ಅಭಿನಂದಿಸಿದರು. ಈ ಪ್ರಶಸ್ತಿಗಾಗಿ ದೇಶದಾದ್ಯಂತ ಅನೇಕ ಕಾಲೇಜುಗಳು ಸ್ಪರ್ಧಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಶಸ್ತಿಯು ಕಾರ್ಮೆಲ್ ಡಿಗ್ರಿ ಕಾಲೇಜಿಗೆ ಬಂದಿರುವುದು ಅತೀವ ಸಂತೋಷದ ವಿಷಯವಾಗಿದೆ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ ಮಂಡಳಿಯ ಸದಸ್ಯರಾದ ಮೆಲ್ವಿನ್ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಡಾ. ಲತಾ ಫರ್ನಾಂಡಿಸ್ ಎ ಸಿ ,ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿ ನಾಯಕ ಮೆಲ್ವಿನ್, ನಾಯಕಿ ತೇಜಸ್ವಿ ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿಗಳಾದ ಮಧುರ ಕೆ,, ದೀಪ್ತಿ ಡಿಸೋಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು

Edited By : PublicNext Desk
Kshetra Samachara

Kshetra Samachara

04/08/2021 10:19 am

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ