ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರಖಂಡ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ದೇವಸ್ಥಾನದ ಜಾತ್ರೋತ್ಸವ ಹಾಗೂ ಇತರ ಉತ್ಸವ ಸಂದರ್ಭ ಅನ್ಯಮತೀಯರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಿರುವಂತೆ ಕೋರಿ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಅನ್ಯ ಮತೀಯರಿಂದ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಇಂತಹ ಘಟನೆಗಳು ಹಿಂದೂ ಆಸ್ತಿಕರ ನಂಬಿಕೆಗೆ ಘಾಸಿಯನ್ನುಂಟುಮಾಡಿದೆ. ಹಿಂದೂ ಹಬ್ಬ ಹರಿದಿನಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಆ ಸಮುದಾಯದವರು ಹಿಂದೂಗಳ ನಂಬಿಕೆಗೆ ಕೊಡಲಿಯೇಟು ಕೊಡುತ್ತಿರುವುದು ವಿಪರ್ಯಾಸ ವೇ ಸರಿ.
ಈ ಎಲ್ಲ ವಿಷಯ ಗಮನದಲ್ಲಿಟ್ಟು, ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವ ಸಹಿತ ಇತರ ಉತ್ಸವಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದಾಗಿ ವಿನಂತಿಸಲಾಗಿದೆ. ಮನವಿ ನೀಡುವ ಸಂದರ್ಭ ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ವಿಶಾಖ್ ಸಸಿಹಿತ್ಲು, ಜಿತೇಶ್, ಭವಿತೇಶ್ ಉಪಸ್ಥಿತರಿದ್ದರು.
Kshetra Samachara
23/03/2022 04:53 pm