ಮುಲ್ಕಿ: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಮೂಲಕ ಕೊರಗಜ್ಜ ದೈವದ ಹಾಡು ಹಾಡಿ, ಭಾರಿ ಪ್ರಚಾರ ಗಿಟ್ಟಿಸಿರುವ ಕಾರ್ಕಳ ಬಳಿಯ ಹಿರ್ಗಾನದ ಬಾಲಕ ಕಾರ್ತಿಕ್ ಇದೀಗ ಹಾಡಿರುವ ಧ್ವನಿಸುರುಳಿ "ಕರಿಯಜ್ಜೆ" ಬಿಡುಗಡೆ ಸೋಮವಾರ ಮುಂಡ್ಕೂರು ಜಾರಿಗೆ ಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು.
ಡಮರುಗ ಕ್ರಿಯೇಶನ್ಸ್ ನವರ ಧ್ವನಿ ಸುರುಳಿಯನ್ನು ಶ್ರೀ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಹಾಗೂ ಶಾಂತ ದಿವಾಕರ ಪೂಜಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರ ಮತ್ತು ಡಮರುಗ ಕ್ರಿಯೇಷನ್ಸ್ ವತಿಯಿಂದ ಕಾರ್ತಿಕ್ ನನ್ನು ಗೌರವಿಸಲಾಯಿತು ಹಾಗೂ ಆತನಿಂದ ಹಾಡನ್ನು ಹಾಡಿಸಿ ನೆರೆದಿದ್ದ ಸಾವಿರಾರು ಜನ ಭಾವುಕರಾದರು.
ದೈಹಿಕವಾಗಿ ನ್ಯೂನತೆ ಹೊಂದಿದ್ದರೂ ಮಾನಸಿಕವಾಗಿ ಸದೃಢವಾಗಿ ತನ್ನ ಹಾಡಿನ ಮೂಲಕ ಖ್ಯಾತಿ ಪಡೆದಿರುವ ಕಾರ್ತಿಕ್ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸುವಾಗ ಮುಖಕ್ಕೆ ಕೈಯಿಟ್ಟು ನಾಚಿ ನೀರಾಗಿದ್ದ!
ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಅಧಿಕೃತ ವೆಬ್ ಸೈಟ್ ಬಿಡುಗಡೆ ನಡೆಯಿತು. ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ವೆಬ್ ಸೈಟ್ ಬಿಡುಗಡೆಗೊಳಿಸಿದರು. ಕ್ಷೇತ್ರದ ಧೀರಜ್ ದಿವಾಕರ ಪೂಜಾರಿ, ದೈವಾರಾಧಕ ಸಂಘದ ಅಶೋಕ್ ಶೆಟ್ಟಿ ಗಾಯಕಿ ಚೈತ್ರಾ ಕಲ್ಲಡ್ಕ, ಡಮರುಗ ತಂಡದ ಜಿ.ಎಸ್. ಗುರುಪುರ, ನಿರೂಪಕ ಮಧುರಾಜ್ ಗುರುಪುರ, ಸುಶಾಂತ್ ಚಕ್ರಪಾಣಿ, ವೆಬ್ ಸೈಟ್ ನ ಯಶವಂತ ಐಕಳ, ಕಾರ್ತಿಕ್ ನ ಮಾತಾಪಿತರಾದ ಪೂವಪ್ಪ ಮತ್ತು ಲೋಲಾಕ್ಷಿ, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ, ಸಂತೋಷ್ ಕುಮಾರ್ ಕಿನ್ನಿಗೋಳಿ, ಹರಿಪ್ರಸಾದ್ ನಂದಳಿಕೆ ಮತ್ತಿತರರಿದ್ದರು. ಶರತ್ ಶೆಟ್ಟಿ, ಮಧುರಾಜ್ ಕಲ್ಲಡ್ಕ ನಿರೂಪಿಸಿದರು.
Kshetra Samachara
09/11/2020 09:26 pm