ಸುರತ್ಕಲ್: ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶಿವಳ್ಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಶಿವಳ್ಳಿ ಸ್ಪಂದನ ಮಂಗಳೂರು ವತಿಯಿಂದ ಸುರತ್ಕಲ್‌ನ ತಡಂಬೈಲ್ ಶ್ರೀ ದುರ್ಗಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಅರ್ಚಕ ಲಕ್ಷ್ಮೀನಾರಾಯಣ ಭಟ್ ಆಶೀರ್ವಚನ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ಎನ್‌ಐಟಿಕೆಯ ನಿವೃತ್ತ ಡೀನ್ ಡಾ.ಬಿ.ಆರ್. ಸಾಮಗ, ಬಾಳ ಭಾಸ್ಕರ ರಾವ್ ಮಾತನಾಡಿದರು. ಶಿವಳ್ಳಿ ಸ್ಪಂದನದ ತಾಲೂಕು ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಗಣೇಶ್ ಹೆಬ್ಬಾರ್ ಸುರತ್ಕಲ್ ವಲಯಾಧ್ಯಕ್ಷ ಪಾಡಿ ರಾಧಾಕೃಷ್ಣ ರಾವ್, ಶಿವಳ್ಳಿ ಸ್ಪಂದನ ತಾಲೂಕು ಉಪಾಧ್ಯಕ್ಷ ಬಿ.ಉದಯಶಂಕರ್, ವಲಯ ಕಾರ್ಯದರ್ಶಿ ಕೃಷ್ಣರಾಜ ಭಟ್ ಉಪಸ್ಥಿತರಿದ್ದರು.
Kshetra Samachara
15/10/2020 11:34 pm