ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ , ರಾಜ್ಯ ಸರಕಾರದ ಜನಪರ ಯೋಜನೆ ಜನರಿಗೆ ತಿಳಿಸಿ: ಶಾಸಕ ಉಮಾನಾಥ ಕೋಟ್ಯಾನ್

ಮುಲ್ಕಿ: ಕಳೆದ ಆರು ವರ್ಷದಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಆಡಳಿತ ಹಾಗೂ ಕೇಂದ್ರ ಸರಕಾರದ ಜನಪರ ಯೋಜನೆ , ಭ್ರಷ್ಟ್ರಾಚಾರ ರಹಿತ ಆಡಳಿತ ವಿಶ್ವವೇ ನಮ್ಮ ದೇಶವನ್ನು ನೋಡುವಂತೆ ಮಾಡಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಅ. 11 ರಂದು ಪುನರೂರು ವಿಶ್ವನಾಥ ದೇವಸ್ಥಾನದ ಸಭಾಭವನದಲ್ಲಿ ಕಿನ್ನಿಗೋಳಿ ಗ್ರಾಪಂ ವ್ಯಾಪ್ತಿಯ ಕುಟುಂಬ ಮಿಲನ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರಕಾರದ ಉತ್ತಮ ಯೋಜನೆ- ಯೋಚನೆ ಬಡಜನರಿಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು.

ಮುಂದಿನ ಗ್ರಾಪಂ ಚುನಾವಣೆಯಲ್ಲಿ ಕಿನ್ನಿಗೋಳಿ ಗ್ರಾಪಂನ ಎಲ್ಲಾ 21 ಸ್ಥಾನ ನಾವು ಗೆದ್ದು ಜನ ಸೇವೆಗೆ ಸಜ್ಜಾಗಬೇಕು ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಉದ್ಘಾಟಿಸಿದರು.

ಮೂಡಬಿದಿರೆ ಮಂಡಲದ ಅಧ್ಯಕ್ಷ ಸುನಿಲ್ ಆಳ್ವ , ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ ಜಿಲ್ಲಾ ಕಾರ್ಯದರ್ಶಿ ಪ್ರಭಾರಿ ಸುಖೇಶ್ ಶೆಟ್ಟಿ ಶಿರ್ತಾಡಿ, ಸೂರಜ್ ಜೈನ್, ಜಿಪ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಪಂ ಸದಸ್ಯ ಶರತ್ ಕುಮಾರ್ ಕುಬೆವೂರು, ಮಾಜಿ ಜಿಪಂ ಸದಸ್ಯೆ ಆಶಾ ಆರ್. ಸುವರ್ಣ, ಕಿನ್ನಿಗೋಳಿ ಪ್ರಭಾರಿ ನವೀನ್ ರಾಜ್, ಶಕ್ತಿ ಕೇಂದ್ರದ ಅಧ್ಯಕ್ಷೆ ಮಂಜುಳಾ, ದಲಿತ ಮೋರ್ಚಾ ಕಾರ್ಯದರ್ಶಿ ಕಪಿಲ್ ಅಂಚನ್ ಗುತ್ತಕಾಡು, ಹೇಮಂತ್ ಕುಮಾರ್ , ರಿತೇಶ್ ಶಾಂತಿ ಪಲ್ಕೆ , ಮಾಜಿ ಗ್ರಾಪಂ ಸದಸ್ಯೆ ಲೀಲಾ ಬಂಜನ್, ಪೂರ್ಣಿಮಾ ಉಪಸ್ಥಿರಿದ್ದರು. ಜಿಲ್ಲಾ ಸಮಿತಿಯ ದೇವ ಪ್ರಸಾದ್ ಪುನರೂರು ಪ್ರಸ್ತಾವನೆಗೈದು, ಸ್ವಾಗತಿಸಿದರು. ದಿವಾಕರ ಕರ್ಕೇರ ನಿರೂಪಿಸಿದರು. ಸಂತೋಷ್ ಶೆಟ್ಟಿ ಪುನರೂರು ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

12/10/2020 04:13 pm

Cinque Terre

3.26 K

Cinque Terre

0

ಸಂಬಂಧಿತ ಸುದ್ದಿ