ಮುಲ್ಕಿ: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯು ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಲ್ಪ ಕಡಿಮೆಯಾಗಿದ್ದು ಸಂಜೆ ಬಳಿಕ ಪುನ: ಆರಂಭಗೊಂಡಿದೆ.
ಸೋಮವಾರದಂದು ಬಿರುಸಿನ ಗಾಳಿ ಹಾಗೂ ಮಳೆಯಿಂದ ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲುವಿನಲ್ಲಿ ಕುಮುದಾ ಎಂಬವರ ಮನೆಯ ಮಾಡಿನ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ.ಕೂಡಲೇ ಸ್ಥಳೀಯರು ಪ್ಲಾಸ್ಟಿಕ್ ಶೀಟ್ ಅಳವಡಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ. ತಾಲೂಕು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಜಲಾವೃತಗೊಂಡಿದ್ದ ತಾಲೂಕಿನ ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಪಂಜ,ಉಲ್ಯ,ಮೊಗಪಾಡಿ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಿತ್ತಬೈಲು,ಕಿಲೆಂಜೂರು,ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕರ್ನಿರೆ, ಮುಲ್ಕಿ ನ. ಪಂ ವ್ಯಾಪ್ತಿಯ ,ಮಾನಂಪಾಡಿ,ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಕಕ್ವ,ಮಟ್ಟು ಪರಿಸರದಲ್ಲಿ ನೆರೆ ಇಳಿಮುಖವಾಗಿದೆ.
ಜಲಾವೃತಗೊಂಡ ಪ್ರದೇಶದ ಗ್ರಾಮಸ್ಥರು ಮಳೆ ಕಡಿಮೆಯಾದ ಕಾರಣ ನಿಟ್ಟಿಸಿರು ಬಿಡುವಂತಾಗಿದೆ.
Kshetra Samachara
11/07/2022 08:19 pm