ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾವರ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ನಾವರ ಗ್ರಾಮದ ಜಾಲ ಎಂಬಲ್ಲಿನ ವಸಂತ ಕೋಟ್ಯಾನ್ ಅವರ ಮನೆಯ ಬಾವಿಗೆ ಚಿರತೆಯೊಂದು ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿತ್ತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕಾರ್ಕಳದಿಂದ 15 ಮಂದಿಯ ತಂಡವೊಂದು ಬಂದು, ಚಿರತೆಯನ್ನು ಬಲೆಯ ಮೂಲಕ ಹಿಡಿದು ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಚಿರತೆಗಳ ಹಾವಳಿ ನಾವರ, ಸುಲ್ಕೇರಿ ಗ್ರಾಮದ ಸುತ್ತಮುತ್ತ ಹೆಚ್ಚಿದೆ. ಸಾಕುನಾಯಿಗಳು, ಕೋಳಿಗಳು ಕಣ್ಮರೆಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.
Kshetra Samachara
03/06/2022 08:02 pm