ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲ ನಗರಿಯಲ್ಲಿ ಡಾಲ್ಫಿನ್ ಸಂರಕ್ಷಣೆ ಯೋಜನೆಗೆ ಮುಂದಾದ ಅರಣ್ಯ ಇಲಾಖೆ

ಮಂಗಳೂರು: ಮಂಗಳೂರು ಕಡಲ ತೀರ ಪ್ರದೇಶದಲ್ಲಿ ಡಾಲ್ಫಿನ್ ಗಳು ಕಾಣಿಸಿಕೊಂಡಿಲ್ಲ, ಆದರೆ ಡಾಲ್ಫಿನ್ ಶವಗಳು ತೀರಕ್ಕೆ ಬಂದಿವೆ.

ಹಾಗಾಗಿ ಡಾಲ್ಫಿನ್ ಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಕಡಲ ನಗರಿ ಮಂಗಳೂರಿನ ತೀರದಲ್ಲಿ ಡಾಲ್ಫಿನ್ ಸಂರಕ್ಷಣಾ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಅರಣ್ಯ ಇಲಾಖೆಯ ಮಂಗಳೂರು ವಿಭಾಗ ಐದು ವರ್ಷಗಳ ಡಾಲ್ಫಿನ್ ಸಂರಕ್ಷಣೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಪ್ರದೇಶಗಳ ಸಮೀಕ್ಷೆ ಮತ್ತು ಗಡಿರೇಖೆಗೆ ಒತ್ತುನೀಡಲಾಗಿದೆ.

ಮಂಗಳೂರಿನ ಸಮುದ್ರ ತೀರದಲ್ಲಿ ಡಾಲ್ಫಿನ್ ಗಳು ಇವೆಯೇ ಎಂದು ಪರಿಶೀಲಿಸಲು ಮತ್ತು ಪ್ರದೇಶವನ್ನು ಗುರುತಿಸಲು ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಫಿಶರೀಸ್ ಕಾಲೇಜ್, ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಇತರರ ತಜ್ಞರನ್ನು ಒಳಗೊಂಡ ಸಮೀಕ್ಷೆಯನ್ನು ಪ್ರಸ್ತಾಪಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

07/10/2020 03:12 pm

Cinque Terre

4.15 K

Cinque Terre

0

ಸಂಬಂಧಿತ ಸುದ್ದಿ