ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ತಿರುಚಿ ಗುಂಪು ಘರ್ಷಣೆಗೆ ಸಂಚು; ಪ್ರಚೋದನಕಾರಿ ಖಾತೆಗಳ ವಿರುದ್ಧ ಕಾನೂನು ಕ್ರಮ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ಅನ್ನು ತಿರುಚಿ ಗುಂಪು ಘರ್ಷಣೆ ನಡೆಸಲು ಸಂಚು ರೂಪಿಸುತ್ತಿರುವ ಯೂಟ್ಯೂಬ್ ಖಾತೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ವೈರಲ್ ಆಗಿರುವುದನ್ನು ಆಗಿರುವ ‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ವೀಡಿಯೋವನ್ನು ಎಡಿಟ್ ಮಾಡಿ ಅಥವಾ ಹೊಸದಾಗಿ ಚಿತ್ರೀಕರಿಸು ಯೂಟ್ಯೂಬ್ ನಲ್ಲಿ ಹರಿಯಬಿಟ್ಟಿರುವುದು ಕಂಡುಬಂದಿದೆ. ನಕಲಿ ದಾಖಲೆಯಿಂದ ಇದನ್ನು ಸೃಷ್ಟಿಸಲಾಗಿದ್ದು, ಇದರ ಹಿಂದೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟು ಮಾಡುವ ಸಂಚು ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಹಾಗೂ ಪುಟ ನಿರ್ವಹಿಸುವವರ ವಿರುದ್ಧವೂ ಕ್ರಮ

ಕೈಗೊಳ್ಳಲಾಗುವುದು. ಸಾಮಾಜಿಕ ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/01/2021 11:35 am

Cinque Terre

4.14 K

Cinque Terre

1

ಸಂಬಂಧಿತ ಸುದ್ದಿ