ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪುರಸಭೆ‌ ಸದಸ್ಯ, ರೌಡಿ ಶೀಟರ್‌ ಹಸೈನರ್ ತಂಡ‌ದಿಂದ ಮನೆಗೆ ನುಗ್ಗಿ ಹಲ್ಲೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆ ಸದಸ್ಯನ‌ ಪಟಾಲಂ, ತಡರಾತ್ರಿ ಮನೆಯೊಂದಕ್ಕೆ ನುಗ್ಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪುರಸಭೆ‌ ಸದಸ್ಯ, ರೌಡಿ ಶೀಟರ್ ಆಗಿರೋ‌ ಹಸೈನರ್ ನ ತಂಡ‌ ಬಂಟ್ವಾಳದ ಬಿ.ಮೂಡ ಗ್ರಾಮದ ಸಾಹುಲ್ ಹಮೀದ್ ಎಂಬವರ ಮನೆಗೆ ನುಗ್ಗಿ ದಾಂಧಲೆ‌ ನಡೆಸಿದೆ. ಮನೆ ಬಾಡಿಗೆಯ ವ್ಯಾಜ್ಯದ ಹಿನ್ನಲೆಯಲ್ಲಿ ತಂಡವು ಮನೆಯೊಳಗೆ ಗರ್ಭಿಣಿ‌ ಇದ್ದರೂ ನುಗ್ಗಿ ಹಲ್ಲೆ‌ ನಡೆಸಿದೆ. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ 112 ಬೀಟ್ ಪೊಲೀಸರು ಬಂದಿದ್ರಿಂದ‌ ದೊಡ್ಡ ಅನಾಹುತ ತಪ್ಪಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಘಟನೆ ಬಗ್ಗೆ ಎರಡೂ ಕಡೆಯಿಂದ ದೂರು- ಪ್ರತಿದೂರು ದಾಖಲಾಗಿದ್ದು‌, ತಲೆಮರೆಸಿಕೊಂಡಿರುವ‌ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Manjunath H D
PublicNext

PublicNext

13/12/2024 06:20 pm

Cinque Terre

15.59 K

Cinque Terre

0

ಸಂಬಂಧಿತ ಸುದ್ದಿ