ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆರೋಪಿಗಳಿಗೆ ಬಾರ್ ನಲ್ಲಿ ಮದ್ಯಸೇವನೆಗೆ ಅವಕಾಶ ನೀಡಿರುವ ಸಿಸಿಬಿ ಪೊಲೀಸರು ವರ್ಗಾವಣೆ

ಮಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಆರೋಪಿಗಳಿಗೆ ಬಾರ್ ನಲ್ಲಿ ಮದ್ಯಸೇವನೆ ಹಾಗೂ ಊಟ ಮಾಡಲು ಅವಕಾಶ ನೀಡಿರುವ ಎಂಟು ಮಂದಿ ಮಂಗಳೂರು ಸಿಸಿಬಿ ಪೊಲೀಸರನ್ನು ಶಿಸ್ತುಕ್ರಮ ಕೈಗೊಂಡು ವರ್ಗಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ‌.

ಈ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡು, ಘಟನೆಯಲ್ಲಿ ಭಾಗಿಯಾಗಿರುವ 3 ಮಂದಿ ಸಿಸಿಬಿ ಎಎಸ್ಐ ಹಾಗೂ 5 ಮಂದಿ ಸಿಸಿಬಿ ಪೊಲೀಸ್ ಸಿಬ್ಬಂದಿಯನ್ನು ಸಿಸಿಬಿ ಘಟಕದಿಂದ ನಗರ ಕಮಿಷನರೇಟ್ ನ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತರು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಎಲ್ಲಾ ಎಂಟು ಮಂದಿಯನ್ನು ಕೊಣಾಜೆ, ಬಜ್ಪೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಕಂಕನಾಡಿ ನಗರ ಠಾಣೆ, ಮಂಗಳೂರು ದಕ್ಷಿಣ ಠಾಣೆ, ಉರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ

ಈ ಪ್ರಕರಣವನ್ನು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದರು.

Edited By : Nagaraj Tulugeri
Kshetra Samachara

Kshetra Samachara

30/01/2021 10:32 pm

Cinque Terre

9.41 K

Cinque Terre

3

ಸಂಬಂಧಿತ ಸುದ್ದಿ