ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಅಕ್ರಮ ಪ್ರವೇಶ; ಬಾಂಗ್ಲಾದೇಶಿ ವಲಸಿಗನಿಗೆ 2 ವರ್ಷ ಜೈಲು

ಮೂಡುಬಿದಿರೆ: ಭಾರತಕ್ಕೆ ಸೂಕ್ತ ದಾಖಲೆಗಳಿಲ್ಲದೆ ಅಕ್ರಮ ಪ್ರವೇಶ ಮಾಡಿರುವ ಬಾಂಗ್ಲಾ ದೇಶದ ಪ್ರಜೆಗೆ ಮೂಡುಬಿದಿರೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿ, ಆದೇಶಿಸಿದೆ.

ಅಕ್ರಮ ವಲಸಿಗ, ಬಾಂಗ್ಲಾದೇಶದ ದುಲಾಲ್ ಬೈರಾಗಿ ಎಂಬಾತ ಮೂಡುಬಿದಿರೆ ತಾಲೂಕಿನ ಇರುವೈಲು ಎಂಬಲ್ಲಿ ಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸರು ಕಳೆದ ವರ್ಷ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯ ವಿಚಾರಣೆ ಸಂದರ್ಭ ಆರೋಪಿ ಅಕ್ರಮ ವಲಸಿಗನೆಂಬುದು ಸಾಬೀತಾಗಿದೆ. ಮೂಡುಬಿದಿರೆ ಜೆ.ಎಂ.ಎಫ್.ಸಿ. ನ್ಯಾಯಾಲಯ ಅಪರಾಧಿಗೆ ಎರಡು ವರ್ಷಗಳ ಸಜೆ ವಿಧಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶೋಭಾ ಎಸ್. ಆರೋಪಿ ವಿರುದ್ಧ ವಾದಿಸಿದರು. ಇಲ್ಲಿನ ಸಹಾಯಕ ಠಾಣಾಧಿಕಾರಿ ವಿನಾಯಕ ಬಾವಿಕಟ್ಟೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

18/12/2020 10:26 pm

Cinque Terre

10.07 K

Cinque Terre

0

ಸಂಬಂಧಿತ ಸುದ್ದಿ