ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: "ಹೊಸ ಕೃಷಿ ಮಸೂದೆಯಿಂದ ಕಾರ್ಪೊರೇಟ್ ಕುಳಗಳಿಗೆ ಮಾತ್ರ ಖುಷಿ"

ಮುಲ್ಕಿ: ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ಕಿನ್ನಿಗೋಳಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು.

ಕೃಷಿಕ ವಿಲ್ಪಿ ಫೆರ್ನಾಂಡಿಸ್ ಮಾತನಾಡಿ, ಕಾರ್ಪೊರೇಟ್

ಕುಳಗಳಿಗೆ ಕೃಷಿಯಲ್ಲೂ ಏಕಸ್ವಾಮ್ಯತೆ ನೀಡಲು ಹೊರಟಿರುವ ಕೇಂದ್ರ ಸರಕಾರದ ಈ ನಿಲುವು ಸರಿಯಲ್ಲ. ಕಾಯ್ದೆ ಜಾರಿಗೆ ಬರಲಿ. ಆದರೆ, ಸೂಕ್ತ ತಿದ್ದುಪಡಿಯೊಂದಿಗೆ ಜಾರಿಗೆ ಬರಲಿ. ಎಂ.ಎಸ್ .ಪಿ. ಲಿಖಿತ ರೂಪದಲ್ಲಿ ನಿಗದಿ ಆಗಲಿ. ಕಾರ್ಪೊರೇಟ್ ಕುಳಗಳಿಗೆ ಚೌಕಾಸಿಗೆ ಅವಕಾಶ ಇಲ್ಲದಿರಲಿ. ತನ್ನದೇ ಭೂಮಿಯಲ್ಲಿ ರೈತ ಜೀತದಾಳು ಆಗುವುದು ಬೇಡ. ರೈತರ ಪ್ರತಿಭಟನೆಗೆ ಎಲ್ಲ ವರ್ಗದ ಜನರಿಂದ ಮನ್ನಣೆ, ಪ್ರೋತ್ಸಾಹ ಜೊತೆಗೆ ಬೆಂಬಲ ಸಿಗಬೇಕಿತ್ತು. ಆದರೂ ಇದನ್ನು ಕೇವಲ ರೈತರಿಗೆ ಮೀಸಲು ಮಾಡಿ ಜನಸಾಮಾನ್ಯರು ಕೆಲವು ಕಡೆ ತೋರಿಸಿದ ಪ್ರತಿಕ್ರಿಯೆ ಬಹಳ ನೀರಸವಾಗಿತ್ತು. ಪ್ರಜಾಪ್ರಭುತ್ವ ನಮ್ಮದೇ, ಸರಕಾರವೂ ನಮ್ಮದೇ, ಪೊಲೀಸ್ ಅಥವಾ ಇತರ ಇಲಾಖೆಗಳು ನಮ್ಮವೇ. ಆದರೆ, ಜನಪರ ಕೆಲಸ ಆಗದಾಗ ಸರಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕು. ಪ್ರತಿಭಟನೆಗೆ ಕಿನ್ನಿಗೋಳಿ ರೈತಸಂಘದಿಂದ ಯಾವುದೇ ಬೆಂಬಲ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಫ್ರಾನ್ಸಿಸ್ ಸೆರಾವೋ, ರೊಮೌಲ್ಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

09/12/2020 07:58 am

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ