ಮುಲ್ಕಿ: ಮಂಗಳೂರು ಟ್ರಾನ್ಸ್ ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ಬೈಕಂಪಾಡಿ ಸಂಘದ ವತಿಯಿಂದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಗೆ ಕೊಡುಗೆಯಾಗಿ ನೀಡಲಿರುವ ಪೊಲೀಸ್ ಅಸ್ಸಿಸ್ಟನ್ ಬೂತ್ ಅನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಟ್ರಾಫಿಕ್ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಮತ್ತು ಪೊಲೀಸರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕುರಿತು ಶಾಸಕರು ಸಲಹೆ ನೀಡಿದರು.
ಮಂಗಳೂರು ನಗರ ಪೊಲೀಸ್ ಸಂಚಾರ ಉಪ ವಿಭಾಗದ ಉಪ ಪೊಲೀಸ್ ಅಯುಕ್ತ ಎಂ. ಎ. ನಟರಾಜ್, ಮಂಗಳೂರು ಸಂಚಾರಿ ಉತ್ತರ ಪೊಲೀಸ್ ಠಾಣಾಧಿಕಾರಿ ಮೋಹನ್ ಕೊಟ್ಟಾರಿ, ಮಂಗಳೂರು ಟ್ರಾನ್ಸ್ ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ಬೈಕಂಪಾಡಿ ಸಂಸ್ಥೆ ಗೌರವಾಧ್ಯಕ್ಷ ಚಿತ್ತರಂಜನ್, ಅಧ್ಯಕ್ಷ ರಾಜೇಶ್ ಹೊಸಬೆಟ್ಟು, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಝೀರ್ ಅಹ್ಮದ್, ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಸಂದೀಪ್ ಚಿತ್ರಾಪುರ ಉಪಸ್ಥಿತರಿದ್ದರು.
Kshetra Samachara
14/11/2020 10:13 am