ಮುಲ್ಕಿ: ಯಕ್ಷ ದೇಗುಲ ಹತ್ತು ಸಮಸ್ತರು ಹತ್ತನೇ ತೋಕೂರು ವತಿಯಿಂದ ಶ್ರೀ ಓಂಕಾರೇಶ್ವರಿ ಭಜನಾ ಮಂದಿರದ ಬಳಿ ಸಸಿಹಿತ್ಲು ಶ್ರೀ ಭಗವತಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ವತಿಯಿಂದ 'ಕೋಟಿ-ಚೆನ್ನಯ' ಕಥಾ ಪ್ರಸಂಗ ನಡೆಯಿತು.
ಈ ಸಂದರ್ಭ ಸಂಸ್ಥೆ ವತಿಯಿಂದ 'ತುಳುನಾಡ ಮಾಣಿಕ್ಯ' ಅರವಿಂದ ಬೋಳಾರ್, ಮೇಳದ ಪ್ರಧಾನ ಭಾಗವತ ತೆಂಕು-ಬಡಗಿನ ಸವ್ಯಸಾಚಿ ಸತ್ಯನಾರಾಯಣ ಪುಣಿಂಚಿತ್ತಾಯ, ಹಾಸ್ಯದರಸು ಬಿರುದಾಂಕಿತ ಸುಂದರ ಬಂಗಾಡಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ, ಮೇಳದ ಸಂಚಾಲಕ ದಯಾನಂದ ಗುಜರನ್ ಮತ್ತು ಯಕ್ಷದೇಗುಲ 10ನೇ ತೋಕೂರು ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ, "ಮಕ್ಕಳಿಗೆ ಬಾಲ್ಯದಿಂದಲೇ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿ" ಎಂದರು. ತಾಪಂ ಸದಸ್ಯ ದಿವಾಕರ ಕರ್ಕೇರ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಅರ್ಚಕ ಅಪ್ಪು ಯಾನೆ ಶ್ರೀನಿವಾಸ, ಫೇಮಸ್ ಯೂತ್ ಕ್ಲಬ್ ಗೌರವಾಧ್ಯಕ್ಷ ಗುರುರಾಜ ಎಸ್. ಪೂಜಾರಿ ಹಾಗೂ ಯಕ್ಷದೇಗುಲ 10ನೇ ತೋಕೂರು ಗೌರವಾಧ್ಯಕ್ಷ ಜಯಕೃಷ್ಣ ಕೋಟ್ಯಾನ್, ಅಧ್ಯಕ್ಷ ಸಂಜೀವ ಕರ್ಕೇರ ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾಸ್ಕರ್ ಅಮೀನ್ ತೋಕೂರು ನಿರೂಪಿಸಿದರು.
Kshetra Samachara
01/03/2021 05:25 pm