ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ದೇವಳದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ದೇವಳದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಮುಂಬರುವ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಸ್ಥಳೀಯ ಯುವತಿ, ಯುವಕ ಮಂಡಲ ಹಾಗೂ ಗ್ರಾಮಸ್ಥರ ಸಹಕಾರ ಬಯಸಿ, ದೇವಳದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೇವಳ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಮಾತನಾಡಿ, ದೇವಳ ಜಾತ್ರೆ ಸಂದರ್ಭ ಕೊರೊನಾ ನಿಯಮಾವಳಿ ಸಹಿತ ಸ್ವಚ್ಛತೆ ಪಾಲಿಸಿ, ಮುನ್ನಡೆಯಬೇಕಾಗಿದೆ ಎಂದರು.
ದೇಗುಲದ ಜಳಕದ ಕೆರೆಯ ಪಾವಿತ್ರ್ಯತೆ ಕಾಪಾಡಬೇಕು, ಜಾತ್ರಾ ಮಹೋತ್ಸವ ಸಂದರ್ಭ ಅನ್ನದಾನ, ಪಾರ್ಕಿಂಗ್ ವ್ಯವಸ್ಥೆ, ದೇವಳ ಸ್ವಚ್ಛಗೊಳಿಸುವ ಬಗ್ಗೆ ಹಾಗೂ ದೇವರ ಗ್ರಾಮ ಸವಾರಿ ಬಗ್ಗೆ ಚರ್ಚೆ ನಡೆಯಿತು. ಗ್ರಾಮಸ್ಥರಾದ ಮುರಳೀಧರ ಭಂಡಾರಿ, ಕಿರಣ್ ಶೆಟ್ಟಿ, ಗೋಪಾಲ್ ಶಿಮಂತೂರು, ಪ್ರವೀಣ್, ಅವಿನಾಶ್ ಹಾಗೂ ಹೊಟೇಲ್ ಉದ್ಯಮಿ ಉದಯಕುಮಾರ್ ಶೆಟ್ಟಿ ದೇವಸ್ಥಾನದ ಅಭಿವೃದ್ಧಿ, ಮೂಲಭೂತ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು.
ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ, ಜನಪ್ರತಿನಿಧಿಯಾಗಿ ದೇವರ ಸೇವೆಗೆ ಸದಾ ಸಿದ್ಧ. ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ವೇದಿಕೆಯಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪುರುಷೋತ್ತಮ ಭಟ್, ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಶಶಿಕಲಾ ಕುಂದರ್, ಕಲ್ಪನಾ ಬಲ್ಲಾಳ್, ಮುಲ್ಕಿ ಠಾಣೆ ಎಎಸ್ಐ ಚಂದ್ರಶೇಖರ ಉಪಸ್ಥಿತರಿದ್ದರು. ಮೋಹನ್ ಕೋಟ್ಯಾನ್ ಶಿಮಂತೂರು ನಿರೂಪಿಸಿದರು.
Kshetra Samachara
18/02/2021 08:07 pm