ಬಂಟ್ವಾಳ: ಮಂಗಳೂರಿಗೆ ನೀರೊದಗಿಸುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಹೀಗಾಗಿ ಮಂಗಳೂರಿಗರು ಸದ್ಯಕ್ಕೆ ಆತಂಕಪಡಬೇಕಾದ್ದಿಲ್ಲ. ಎರಡು ವರ್ಷಗಳ ಹಿಂದೆ ಇದೇ ಹೊತ್ತಿನಲ್ಲಿ ನೀರು ಕಡಿಮೆಯಾಗಿತ್ತು. ಆದರೆ, ಈಗ ನೀರಿನ ಸಂಗ್ರಹಕ್ಕೆ ಕೊರತೆ ಇಲ್ಲ.
ಡ್ಯಾಂನಲ್ಲಿ 7 ಮೀಟರ್ ನಷ್ಟು ನೀರು ಸಂಗ್ರಹದ ಸಾಮರ್ಥ್ಯವಿದೆ. ಈಗ 6 ಮೀಟರ್ ನೀರು ಭರ್ತಿಯಾಗಿದೆ. ಹೆಚ್ಚುವರಿಯಾದಲ್ಲಿ ಅದನ್ನು ಹೊರಗೆ ಬಿಡಲಾಗುತ್ತಿದೆ. ಫೆಬ್ರವರಿ ಸಮೀಪಿಸುತ್ತಿದ್ದರೂ ಬೇಸಿಗೆಯ ಛಾಯೆ ಇನ್ನೂ ಮೂಡಿಲ್ಲ. ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿಗೆ ತತ್ವಾರವಾಗಿತ್ತು. ಆಗ ತುಂಬೆ ಡ್ಯಾಂನಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಆದರೆ ಈಗ ಹಾಗಿಲ್ಲ.
ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಕಳೆದ ಕೆಲವು ದಿನಗಳ ಹಿಂದೆ ಮಳೆಯಾದ ಪರಿಣಾಮ, ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿದೆ. ಶಂಭೂರು ಡ್ಯಾಂನಲ್ಲಿಂದ ವಿದ್ಯುತ್ ಉತ್ಪಾದಿಸಿ ನೀರನ್ನು ಹೊರಬಿಡುವ ವೇಳೆ ಇಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತದೆ.
ಮಂಗಳೂರು ನಗರಕ್ಕೆ ನೀರು ಪೂರೈಕೆ ದೃಷ್ಟಿಯಿಂದ 7 ಮೀಟರ್ ನೀರು ಸಂಗ್ರಹಿಸುವಷ್ಟು ಸಾಮರ್ಥ್ಯಕ್ಕೆ ಡ್ಯಾಂ ಕಟ್ಟಲಾಗಿದೆ. ಇದಾದ ಬಳಿಕ ನೀರು ಸಂಗ್ರಹವಾದರೆ ಮಂಗಳೂರಿನವರು ನೀರಿಗೆ ತಲೆಬಿಸಿ ಮಾಡಬೇಕಾದ್ದಿಲ್ಲ.
Kshetra Samachara
19/01/2021 05:50 pm