ಮಂಗಳೂರು: ದುಬೈಯ ಪ್ರತಿಷ್ಠಿತ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ಮಾಲೀಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ದುಬೈಯ 10 ವರ್ಷಗಳ ಗೋಲ್ಡನ್ ವೀಸಾ ಲಭ್ಯವಾಗಿದೆ.
ಇದು ಬಹಳ ಗೌರವ, ಪ್ರತಿಷ್ಠೆಯ ವಿಚಾರವಾಗಿದ್ದು, ದುಬೈಯಲ್ಲಿ ಬೆರಳೆಣಿಕೆಯಷ್ಟು ಭಾರತೀಯರಿಗೆ ಮಾತ್ರ ಈ ಗೋಲ್ಡನ್ ವೀಸಾ ದೊರಕಿದೆ. ವಕ್ವಾಡಿಯವರು ಗೋಲ್ಡನ್ ವೀಸಾ ಪಡೆದ ಕರಾವಳಿಯ 2ನೇ ವ್ಯಕ್ತಿ.
ಬಗ್ವಾಡಿ ಪ್ರವೀಣ್ ಶೆಟ್ಟಿ ದುಬೈಯಲ್ಲಿ ಏಳು ಫಾರ್ಚೂನ್ ಗ್ರೂಪ್ ಹೊಟೇಲ್ ಮಾಲೀಕರಾಗಿದ್ದು, ಇತ್ತೀಚೆಗೆ ದುಬೈನಲ್ಲಿ ಫಾರ್ಚೂನ್ ಅಕ್ಕಿಯಮ್ ಹೊಟೇಲ್ ಎಂಬ ನೂತನ 4ಸ್ಟಾರ್ ಹೊಟೇಲ್ ಆರಂಭಿಸಿದ್ದರು. ಇದು ಭವ್ಯ, ವಿಶೇಷ ಸವಲತ್ತು ಹೊಂದಿರುವ ಹೊಟೇಲ್ ಆಗಿದೆ.
ಈ ಹೊಟೇಲ್ ವೀಕ್ಷಿಸಲು ದುಬೈಯ ಡೈರೆಕ್ಟರ್ ಜನರಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್-ಮರಿಯವರು ಬಂದಿದ್ದು, ಕೊರೊನಾ ಭೀತಿ ಕಾಲದಲ್ಲಿಯೂ ಇಂತಹ ಬೃಹತ್ , ವಿಶೇಷ ಸವಲತ್ತು ಹೊಂದಿರುವ ಹೊಟೇಲ್ ನಿರ್ಮಾಣದ ಬಗ್ಗೆ ಹೆಲಾಲ್ ಸಯೀದ್ ಅಲ್-ಮರಿಯವರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭ ಹೊಟೇಲ್ ಮಾಲೀಕ ಬಗ್ವಾಡಿ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಹೆಲಾಲ್ ಸಯೀದ್ ಅಲ್-ಮರಿಯವರು, 10 ನಿಮಿಷಕ್ಕೆಂದು ಬಂದವರು ಹೊಟೇಲ್ ನಲ್ಲಿ 40 ನಿಮಿಷ ಕಾಲ ಕಳೆದರು.
ಹೊಟೇಲ್ ಸುವ್ಯವಸ್ಥೆ ಕಂಡು ಖುಷಿಗೊಂಡು ವಕ್ವಾಡಿಯವರಿಗೆ ಗೋಲ್ಡನ್ ವೀಸಾ ನೀಡಿರುವುದಲ್ಲದೆ, ದುಬೈ ಪ್ರವಾಸೋದ್ಯಮ ಇಲಾಖೆಯಿಂದ ಯಾವ ಸಹಾಯ ಬೇಕಾದರೂ ನೀಡುವ ಭರವಸೆ ನೀಡಿದರು.
Kshetra Samachara
08/01/2021 05:40 pm