ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುಂಜತ್ತಬೈಲ್ ಅತ್ರಬೈಲಿನಲ್ಲಿ ದಾರಿದೀಪ ಉದ್ಘಾಟನೆ

ಮುಲ್ಕಿ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಅತ್ರಬೈಲು ಹೊಳೆ ಬದಿ ಅಳವಡಿಸಲಾದ ನೂತನ ದಾರಿದೀಪ ವ್ಯವಸ್ಥೆಯನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಸುಮಾರು 6.50 ಲಕ್ಷ ರೂ. ವೆಚ್ಚದಲ್ಲಿ ದಾರಿದೀಪ ಅಳವಡಿಸಲಾಗಿದೆ. ಇದರಿಂದಾಗಿ ಸ್ಥಳೀಯ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಸ್ಥಳೀಯ ಕಾರ್ಪೊರೇಟರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್, ಬೂತ್ ಅಧ್ಯಕ್ಷ ಸನತ್, ಬಿಜೆಪಿ ಹಿರಿಯ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

17/12/2020 07:26 am

Cinque Terre

3.71 K

Cinque Terre

0

ಸಂಬಂಧಿತ ಸುದ್ದಿ