ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಚ್ಚನಾಡಿ ತ್ಯಾಜ್ಯ ದುರಂತ ಪ್ರಕರಣ: ನ್ಯಾಯಾಧೀಶೆ ಶಿಲ್ಪಾ ಎ.ಜಿ. ಭೇಟಿ

ಮಂಗಳೂರು: ಪಚ್ಚನಾಡಿಯ ಕುಡುಪು ಮಂದಾರ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶಿಲ್ಪಾ ಎ.ಜಿ. ಭೇಟಿ ನೀಡಿದರು.

‘ಪಚ್ಚನಾಡಿ ತ್ಯಾಜ್ಯ ದುರಂತದಿಂದ ಕುಡಿಯುವ ಜಲಮೂಲ ಕಲುಷಿತಗೊಂಡ ಏಳು ಕುಟುಂಬಗಳಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯು ಹೈಕೋರ್ಟ್‌ಗೆ ಅಫಿಡವಿಟ್ ನೀಡಿದ್ದ ಹಿನ್ನೆಲೆಯಲ್ಲಿ ಈ ಭೆಟಿ ನಡೆಯಿತು.

ಈ ಸಂದರ್ಭ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಮಂದಾರದ ಸಂತ್ರಸ್ತ‌ ಗ್ರಾಮಸ್ಥರ ಅಹವಾಲು ಆಲಿಸಿದರು.

ದೇವಕಿ, ಗಣೇಶ್, ಮಂಜುಳಾ ನಾಗರಾಜ್ ಮತ್ತಿತರರು ಇದ್ದರು.

Edited By : Nagaraj Tulugeri
Kshetra Samachara

Kshetra Samachara

16/12/2020 09:28 am

Cinque Terre

3.31 K

Cinque Terre

0

ಸಂಬಂಧಿತ ಸುದ್ದಿ