ಮಂಗಳೂರು: ಬಹು ನಿರೀಕ್ಷಿತ ಹಾಗೂ ಮಂಗಳೂರಿಗರಿಗೆ ಅನುಕೂಲವಾಗುವ ಮತ್ಸೃಗಂಧ ರೈಲು ಇನ್ನೊಂದು ವಾರದೊಳಗೆ ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಶುರುವಾದಾಗ ಸ್ಥಗಿತಗೊಂಡ ಮತ್ಸೃಗಂಧ ರೈಲನ್ನು ಪುನಾರಂಭಗೊಳಿಸಲು ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಮುಂಬೈ-ಮಂಗಳೂರು ಸೆಂಟ್ರಲ್ ಮಧ್ಯೆ ಓಡುವ ಈ ರೈಲಿನ ಪುನಾರಂಭದ ಬಗ್ಗೆ ಕೊಂಕಣ ರೈಲ್ವೆಯವರ ಪ್ರಸ್ತಾಪಕ್ಕೆ ಮಂಡಳಿ ಅನುಮೋದನೆ ನೀಡಿದೆ.
ಇದು ಕೊಂಕಣ ರೈಲ್ವೆಗೆ ಸೇರಿದ ಹಳಿಯಲ್ಲಿ ಓಡುವ ರೈಲು ದಕ್ಷಿಣ ರೈಲ್ವೆಗೆ ಸೇರಿದೆ. ಅದಕ್ಕಾಗಿ ರೈಲ್ವೆ ಬೋಗಿ, ಇಂಜಿನ್ ಮತ್ತು ಸಮಯವನ್ನು ದಕ್ಷಿಣ ರೈಲ್ವೆ ಗೊತ್ತುಪಡಿಸಬೇಕಾದ ಹಿನ್ನೆಲೆಯಲ್ಲಿ ಆದೇಶವನ್ನು ಕೊಂಕಣ ರೈಲ್ವೆ ದಕ್ಷಿಣ ರೈಲ್ವೆಗೆ ಕಳುಹಿಸಿದೆ. ಅಲ್ಲಿ ರೈಲಿನ ಸಮಯ ಅಂತಿಮಗೊಂಡು ಇನ್ನೊಂದು ವಾರದಲ್ಲಿ ರೈಲು ಸಂಚಾರ ಪುನರಾರಂಭಗೊಳ್ಳಬಹುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.
Kshetra Samachara
09/12/2020 06:22 pm