ಮುಲ್ಕಿ: ಮೆದುಳಿನ ರಕ್ತ ಹೆಪ್ಪುಗಟ್ಟಿದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿನ್ನಿಗೋಳಿ ಸಮೀಪದ ಗೋಳಿಜಾರ ಪ್ರೇಮಾ ಶೆಟ್ಟಿಗಾರ್ ಅವರ ಕುಟುಂಬಕ್ಕೆ ತಾಳಿಪಾಡಿ ಎಳತ್ತೂರು ಜವನೆರ್ ಟೀಮ್ ವತಿಯಿಂದ ಸಂಗ್ರಹಿಸಲಾದ ಒಟ್ಟು 12 ಸಾವಿರ ರೂ. ಹಸ್ತಾಂತರ ಮಾಡಲಾಯಿತು. ಇದರಲ್ಲಿ 2 ಸಾವಿರ ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ಉಳಿದ 10 ಸಾವಿರ ರೂ. ಅವರ ಮನೆಗೆ ತೆರಳಿ ಚೆಕ್ ಮೂಲಕ ನೀಡಲಾಯಿತು.
ಈ ಸಂದರ್ಭ ತಂಡದ ಸದಸ್ಯರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ದಿವಾಕರ ಕರ್ಕೇರ ತಾಳಿಪಾಡಿ, ದೇವಪ್ರಸಾದ್ ಪುನರೂರು, ಗೋಪಾಲ್ ಪುನರೂರು ಮತ್ತು ಪ್ರಸಾದ್ ಕುಮಾರ್ ತಾಳಿಪಾಡಿ ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ತಾಳಿಪಾಡಿ ಪುನರೂರು ಎಳತ್ತೂರು ಫ್ರೆಂಡ್ಸ್, ಕಿನ್ನಿಗೋಳಿ ಮೂರು ಗ್ರಾಮಕ್ಕೆ ಸಂಬಂಧಿಸಿದ ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಲು ಪ್ರಯತ್ನಿಸಲಾಗುವುದು. ನಮ್ಮ ಜೊತೆ ಕೈ ಜೋಡಿಸಿ ಸಹಕರಿಸುವ ಸ್ನೇಹಿತರಿದ್ದಲ್ಲಿ ಗ್ರೂಪ್ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರನ್ನು ಸಂಪರ್ಕಿಸಬಹುದು ಎಂದು ಫ್ರೆಂಡ್ಸ್ ತಂಡದ ಪ್ರಕಟಣೆ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 9480922412 ಮೊಬೈಲ್ ಸಂಪರ್ಕಿಸಬಹುದು ಎಂದು ಕೋರಿದ್ದಾರೆ.
Kshetra Samachara
13/12/2020 10:49 pm