ಮುಲ್ಕಿ:ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಮೆಟ್ರಿಕ್ ಅನಂತರದ 1.82 ಲಕ್ಷ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣ ಕಲೆ ಹೆಸರಿನಲ್ಲಿ ನೀಡಲಾಗುತ್ತಿರುವ ಕರಾಟೆ ಶಿಕ್ಷಣವನ್ನು ರಾಜ್ಯ ಬಜೆಟ್ ಬಳಿಕ ಆರನೇ ತರಗತಿಯಿಂದಲೇ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕಿನ್ನಿಗೋಳಿ ಕಮ್ಮಜೆಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ನಡೆಯುತ್ತಿರುವ ಕರಾಟೆ ಶಿಕ್ಷಣವನ್ನು ಪರಿಶೀಲಿಸಿ ಮಾತನಾಡಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ 257 ಮೆಟ್ರಿಕ್ ನಂತರದ 30 ಸಾವಿರ ವಿಧ್ಯಾರ್ಥಿನಿಯರು 818 ವಸತಿ ಶಾಲೆಗಳ1.02 ಲಕ್ಷ ವಿಧ್ಯಾರ್ಥಿನಿಯರು ಸೇರಿ ಒಂಟ್ಟು1704 ಸಂಸ್ಥೆಗಳ1.82 ಲಕ್ಷ ವಿಧ್ಯಾರ್ಥಿನಿಯರಿಗೆ ತರಭೇಟಿ ನೀಡುವ ಗುರಿ ಇದೆ.
ಕರಾಟೆ ಕಲಿತ ಮಕ್ಕಳಲ್ಲಿ ನೈಜವಾದ ಧೈರ್ಯ ಬಂದಿದೆಯಾ, ಪ್ರಯೋಜನ ಆಗಿದೆಯಾ ಎಂದು ಗಮನ ಹರಿಸುತ್ತಿದ್ದೇವೆ. ಎಲ್ಲ ಶಾಸಕರಿಗೂ ಆಯಾಯ ಶಾಲೆಗಳಿಗೆ ಭೇಟಿ ನೀಡಿ ಕರಾಟೆ ತರಗತಿಯನ್ನು ಪರಿಶೀಲಿಸಬೇಕೆಂದು ಪತ್ರ ಬರೆಯಲಾಗಿದೆ. ತಾನೂ ರಾಜ್ಯದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ.
ಒಂದು ಸಾವಿರ ಬ್ಲಾಕ್ ಬೆಲ್ಟ್ ಪಡೆದ ಮಹಿಳಾ ತರಬೇತಿದಾರರನ್ನು ನೇಮಿಸಲು ಸೂಚಿಸಿದ್ದೇವೆ. ಮಹಿಳಾ ತರಬೇತುದಾರರು ಇಲ್ಲದಿದ್ದಾಗ ಪುರುಷ ತರಬೇತುದಾರರನ್ನು ಆಯ್ಕೆ ಮಾಡಲಾಗುವುದು. ಆತ್ಮಸ್ಥೈರ್ಯದೊಂದಿಗೆ ಹೆಣ್ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಚಿನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸುನೀತಾ, ಪ್ರಾಚಾರ‍್ಯ ಪುಟ್ಟಸ್ವಾಮಿ, ಕರಾಟೆ ತರಬೇತುದಾರರಾದ ಶ್ರುತಿ, ಮನೀಷ್, ಬಿಜೆಪಿಯ ಮುಖಂಡರಾದ ಸುನಿಲ್ ಆಳ್ವ, ಕೇಶವ ಕರ್ಕೇರ, ಮಾಧವ ಕೆರೆಕಾಡು, ಜನಾರ್ದನ ಕಿಲೆಂಜೂರು, ಈಶ್ವರ ಕಟೀಲ್, ಭುವನಾಭಿರಾಮ ಉಡುಪ, ರಘುವೀರ್ ಕಾಮತ್, ಮಾರ್ಗನ್ ವಿಲಿಯಂ ಮತ್ತಿತರರಿದ್ದರು.
Kshetra Samachara
24/02/2022 01:28 pm