ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿವಾಗುತ್ತಿದೆ. ಆಗಷ್ಟ್ 1ರಂದು 410 ಜನರಿಗೆ ಹಾಗೂ ಆಗಷ್ಟ್ 2ರಂದು 219 ಜನರಿಗೆ ಸೋಂಕು ದೃಢಪಟ್ಟಿತ್ತು. ನಿನ್ನೆ (ಮಂಗಳವಾರ)ದಿಂದ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ. ಪರಿಣಾಮ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ನಿನ್ನೆ 307 ಜನರಿಗೆ ಸೋಂಕು ದೃಢಪಟ್ಟಿದ್ದರೆ, ಇಂದು ಸಂಖ್ಯೆ 350ಕ್ಕೆ ತಲುಪಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,01,656 ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿನಿಂದ 212 ಜನ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಆ ಮೂಲಕ ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 97,115ಕ್ಕೆ ಏರಿಕೆಯಾಗಿದೆ.
ಇನ್ನು ಸೋಂಕಿನಿಂದ ಇಂದು 6 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,445ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 3,092 ಸಕ್ರಿಯ ಪ್ರಕರಣಗಳಿವೆ.
Kshetra Samachara
04/08/2021 07:17 pm