ಮುಲ್ಕಿ: ಹಳೆಯಂಗಡಿ ಸಮೀಪದ ಹತ್ತನೇ ತೋಕೂರು ಫೇಮಸ್ ಯೂತ್ ಕ್ಲಬ್ ವತಿಯಿಂದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ಕೊರೊನಾ ಬಗ್ಗೆ ಜಾಗೃತಿ ಫಲಕಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿಪಂ ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ, ಹಬ್ಬ-ಹರಿದಿನ ಹಾಗೂ ಜಾತ್ರಾ ಮಹೋತ್ಸವದಲ್ಲಿ ಎಚ್ಚರಿಕೆ ವಹಿಸಿ ಸರಕಾರದ ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಿ ಎಂದರು.
ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಎಲ್. ಕೆ. ಸಾಲ್ಯಾನ್, ಮಾಜಿ ಪಂಚಾಯತ್ ಅಧ್ಯಕ್ಷ ಮೋಹನದಾಸ್, ಫೇಮಸ್ ಯೂತ್ ಕ್ಲಬ್ ನ ಹಿರಿಯ ಮಾರ್ಗದರ್ಶಕ ಗಣೇಶ್ ಜಿ. ಬಂಗೇರ, ಅಧ್ಯಕ್ಷ ಭಾಸ್ಕರ್ ಅಮೀನ್,ಕಾರ್ಯದರ್ಶಿ ಹಿಮಕರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/12/2020 02:40 pm