ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಯಕ್ಷಗಾನ ಬಿ.ಎ. ಪದವಿಯನ್ನು ಅಧ್ಯಯನ ಮಾಡಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ.
ಯಕ್ಷಗಾನ ಮತ್ತು ಇತಿಹಾಸವನ್ನು ಪ್ರಧಾನ ವಿಷಯವನ್ನಾಗಿ, ಅಧ್ಯಯನ ಮಾಡಲು ಅವಕಾಶವಿದ್ದು ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಇದು ಪ್ರಥಮ ಪ್ರಯೋಗವಾಗಿದೆ. ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ತರಬೇತಿಗೊಳಿಸಲು ಕಾಲೇಜು ಸನ್ನದ್ಧವಾಗಿದೆ. ಇದರೊಂದಿಗೆ ಸಂವಹನ ಕೌಶಲ್ಯ, ಡಿಜಿಟಲ್ ಕೌಶಲ್ಯ, ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಸಾಮರ್ಥ್ಯವನ್ನು ಕಲಿಸಿಕೊಡಲಾಗುತ್ತದೆ. ಅತಿ ಕಡಿಮೆ ಶುಲ್ಕದಲ್ಲಿ ಪದವಿಯನ್ನು ಪೂರ್ಣಗೊಳಿಸಬಹುದು.
ಪದವೀಧರರು ಮುಂದೆ ಸ್ವತಂತ್ರವಾಗಿ ಇತರರನ್ನು ತರಬೇತಿಗೋಳಿಸಲು ಸಮರ್ಥರಾಗುತ್ತಾರೆ. ಮುಂದೆ ಬಿ.ಎಡ್. ಹಾಗೂ ಸ್ನಾತಕೋತ್ತರ ಪದವಿಗಳನ್ನು ಇದರ ಆಧಾರದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಯಕ್ಷಗಾನ ಹಿಮ್ಮೆಳ - ಮುಮ್ಮೇಳಗಳ ಸರ್ವಾಂಗೀಣ ಪರಿಚಯ ನೀಡಲಾಗುತ್ತದೆ. ತಜ್ಞ ವಿದ್ವಾಂಸರಿಂದ ತರಬೇತಿ ನೀಡಲಾಗುತ್ತದೆ. ಸೀಮಿತ ವಿದ್ಯಾರ್ಥಿಗಳಿಗೆ ಅವಶ್ಯಕತೆಯ ನೆಲೆಯಲ್ಲಿ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಮುಂದೆ ಈ ಪದವೀಧರರು ದೇಶ - ವಿದೇಶಗಳಲ್ಲಿ ಕರಾವಳಿಯ ಈ ಹೆಮ್ಮೆಯ ಕಲೆಯ ಕುರಿತು ಮಾಹಿತಿ ಪ್ರಾತ್ಯಕ್ಷಿಕೆ ನೀಡಲು ಸಮರ್ಥರಾಗುತ್ತಾರೆ. ಆಸಕ್ತರು ಕಾಲೇಜಿನ ಕಛೇರಿಯನ್ನುಸಂಪರ್ಕಿಸಲು(9945590327)ಕೋರಲಾಗಿದೆ.
Kshetra Samachara
02/07/2022 08:10 pm