ಮುಲ್ಲಕಾಡು:ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾನಿಧಿ ಮತ್ತು ರೋಟರಿ ಕ್ಲಬ್ ಮಂಗಳೂರು, ಹಿಲ್ ಸೈಡ್ ಮತ್ತು ಕಾಂಗ್ನಿಝೆಂಟ್ ಸಂಸ್ಥೆಯ ಸಹಕಾರದಲ್ಲಿ ಮುಲ್ಲಕಾಡುವಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಗೆ ನವೀಕೃತ ಕಂಪ್ಯೂಟರ್ ಲ್ಯಾಬ್ ಮತ್ತು ನೂತನ ಕಂಪ್ಯೂಟರ್ ಕೊಠಡಿಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್, ರೋಟರಿ ಕ್ಲಬ್ ನ ಮುಖ್ಯಸ್ಥರು, ಕಾಗ್ನಿಝೇಂಟ್ ನ ಮುಖ್ಯಸ್ಥರು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ ಯ ಪ್ರಮುಖರು, ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಹಳೆ ವಿದ್ಯಾರ್ಥಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.
*ಈ ಯೋಜನೆಗೆ ವಿಶೇಷವಾಗಿ ಮುತುವರ್ಜಿ ವಹಿಸಿ ಸಹಕರಿಸಿದ ಶಾಸಕರಾದ ವೈ.ಭರತ್ ಶೆಟ್ಟಿ ಯವರಿಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಧನ್ಯವಾದ ಅರ್ಪಿಸಿದರು*.
Kshetra Samachara
19/02/2022 05:25 pm