ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಹಿಜಾಬ್‌ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಏನ್ ಹೇಳ್ತಿದ್ದಾರೆ ಗೊತ್ತೆ ?

ಹಿಜಾಬ್ ಧರಿಸಿ ತರಗತಿಗೆ ಹಾಜರಾಗಬೇಕೆಂಬ ಹೋರಾಟ ಮಾಡುತ್ತಿರುವ ತಮಗೆ ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರೀಪರ ಹೋರಾಟಗಾರರಿಗೆ ಬಹಿರಂಗ ಆಹ್ವಾನ ನೀಡುತ್ತಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಕೊಡುವುದಾದಲ್ಲಿ ಅವರೊಂದಿಗೆ ನಾವು ಸೇರಿಕೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ಹಿಜಾಬ್‌ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.

ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಹೋದಲ್ಲಿ ಬಹಳ ಸಮಯವಾಗುತ್ತದೆ. ಈಗಾಗಲೇ ನಮ್ಮ ಸಾಕಷ್ಟು ಹಾಜರಾತಿ ಹೋಗಿದೆ. ಹಾಜರಾತಿ ಇಲ್ಲದಿದ್ದಲ್ಲಿ ಪರೀಕ್ಷೆ ಬರೆಯುವುದಕ್ಕೂ ಆಗುವುದಿಲ್ಲ.‌ ಕಾಲೇಜಿಗೆ ಹೋಗಬೇಕೆಂದಿದೆ. ಆದರೆ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಮುಂದೇನಾಗುತ್ತೆ ಎಂದು ನೋಡುತ್ತೇವೆ. ನಾವು ಡಿಸಿಯವರೊಂದಿಗೆ ಮಾತನಾಡಿದ್ದೇವೆ. ಡಿಸಿಯವರ ಮಾತಿನಲ್ಲಿ ಅಸಹಾಯಕತೆ ಗೊತ್ತಾಗುತ್ತಿದೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನಮಗೆ ಗೊತ್ತಿದೆ. ದಾಖಲೆ ಇರುವುದರಿಂದ ಕಾನೂನಾತ್ಮಕ ಹೋರಾಟ ಮಾಡಿ ಎಂಬ ಅಭಿಪ್ರಾಯ ನೀಡಿದ್ದಾರೆ.

ಎಬಿವಿಪಿ‌ ಒತ್ತಡದಿಂದ ವಿವಿ ಕಾಲೇಜಿನ ಸಿಂಡಿಕೇಟ್ ಹಿಜಾಬ್ ನಿಷೇಧದ ಆದೇಶ ಮಾಡಿದೆ. ಈ ಹಿಂದೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೊ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ಇವತ್ತು ಎಬಿವಿಪಿಯ ಒತ್ತಡ ಮುಖ್ಯವೋ ನಮ್ಮ ಶಿಕ್ಷಣ ಮುಖ್ಯವೊ ಎಂದು ಪ್ರಶ್ನಿಸುತ್ತೇವೆ. ಇದು ಹೈಕೋರ್ಟ್ ವರೆಗೂ ಹೋಗಬೇಕಿಲ್ಲ. ವಿಶ್ವವಿದ್ಯಾಲಯದ ಮಟ್ಟದಲ್ಲೇ ಬಗೆಹರಿಸಬಹುದು. ನಾವು ಶಾಸಕ ಯು.ಟಿ ಖಾದರ್ ರನ್ನು ಭೇಟಿ ಮಾಡಿದ್ದೇವೆ. ಆದರೆ ಅವರಿಂದ ಸರಿಯಾಗಿ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಅವರು ಅಡ್ಯಾರ್ ಗೆ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಗೌಸಿಯಾ ಹೇಳಿದರು.

Edited By :
PublicNext

PublicNext

30/05/2022 06:36 pm

Cinque Terre

29.02 K

Cinque Terre

3

ಸಂಬಂಧಿತ ಸುದ್ದಿ