ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಹಾಗೂ ಗ್ರಾಮಸ್ಥರ ಸಭೆ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಶ್ರಮದಾನದ ಮೂಲಕ ದೇವಸ್ಥಾನದ ಜೀರ್ಣೋದ್ಧಾರ ನಿರಂತರವಾಗಿ ನಡೆಯುತ್ತಿದ್ದು ಮುಂದಿನ ಕಾರ್ಯಕ್ರಮಗಳು ಮತ್ತಷ್ಟು ಯಶಸ್ವಿಯಾಗಿ ನಡೆಯಲಿ ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ ಕರ ಸೇವಕರ ನಿರಂತರ ಶ್ರಮದಾನ ಅಭಿನಂದನೀಯವಾಗಿದ್ದು ದೇವರ ಆಶೀರ್ವಾದ ಖಂಡಿತ ಇದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ವರ್ಷದ ಎಪ್ರಿಲ್ ತಿಂಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ತಿಯಾಗಿ ಶ್ರೀದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಸಾಧ್ಯತೆ ಇದೆ ಎಂದರು. ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಸಭೆ ನಡೆಸಿ ನೂತನ ಬ್ರಹ್ಮಕಲಶೋತ್ಸವ ಸಮಿತಿಯ ನೇಮಕ ಹಾಗೂ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಪ್ರಚಾರ ಫಲಕಗಳನ್ನು ಅಳವಡಿಸಲಾಗುವುದು ಎಂದರು.
ಮಾಜೀ ಜಿ ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಪ್ರಚಾರದ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಯತ್ನಿಸಬೇಕು ಎಂದರು
ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಅನುಪಮಾ ರಾವ್, ಹೇಮನಾಥ ಅಮೀನ್, ವಿಜಯ ಶೆಟ್ಟಿ ಕೋಲ್ನಾಡು ಮತ್ತಿತರವರು ಮಾತನಾಡಿದರು.
ದೇವಸ್ಥಾನದ ಅರ್ಚಕ ಮಧುಸೂದನ ಆಚಾರ್ಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ ಭಟ್, ಸದಸ್ಯರಾದ ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ್ ಕೋಟ್ಯಾನ್, ವಿಶ್ವನಾಥ, ವಿಪುಲ ಡಿ ಶೆಟ್ಟಿಗಾರ್, ಶಾರದಾ ಜಿ ಬಂಗೇರ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ವ್ಯಾಸರಾವ್ ಮಜಿ ಗುತ್ತು, ರತ್ನಾಕರ್ ಶೆಟ್ಟಿಗಾರ್ ಕಲ್ಲಾಪು, ಗುರುರಾಜ್ ಎಸ್ ಪೂಜಾರಿ, ಮೋಹನ್ ದಾಸ್, ಸುಗಂಧಿ ಡಿ ಕೊಂಡಾಣ, ದೇವಾಲಯದ ಸಿಬ್ಬಂದಿ ವರ್ಗ, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು, ಊರ ಪರವೂರ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
09/10/2022 06:55 pm