ಮುಲ್ಕಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶಾಂತಿನಗರ ಖಿಲ್ ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ವತಿಯಿಂದ ಈದ್ ಮಿಲಾದ್ ಸಮಾರಂಭದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಳಿ ಪಾಡಿ ಶಾಂತಿನಗರ ಕೆ ಜೆ ಎಮ್ ಅಧ್ಯಕ್ಷ ಜೆಎಚ್ ಅಬ್ದುಲ್ ಜಲೀಲ್ ವಹಿಸಿ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳ ಸಾಧನೆಗೆ ಸಹಕಾರ ನೀಡಲು ಮನವಿ ಮಾಡಿ, ಪರಿಸರದಲ್ಲಿ ಕಾಲೇಜು ಸ್ಥಾಪನೆಗೆ ದಾನಿಗಳ ಸಹಕಾರ ಅಗತ್ಯ ಎಂದರು.ಖತೀಬರಾದ ಉಮರುಲ್ ಫಾರೂಕ್ ಸಖಾಫಿ ದುವಾ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಶಮೀರ್ ಶಾಂತಿನಗರ, ಹೈದರ್ ಆಲಿ ಬೋಳಾರ್, ಮೊಹಮ್ಮದ್ ಶಮೀರ್ ಕಾಟಿಪಳ್ಳ, ಕಿನ್ನಿಗೋಳಿ ಮುಲ್ಕಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಟಿ ಹೆಚ್ ಮಯ್ಯದ್ದಿ, ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ಅಶ್ರಫ್ ಸಖಾಫಿ ಪುನರೂರು, ಎನ್. ಎಚ್. ಎ. ಅಧ್ಯಕ್ಷ ಅಬ್ದುಲ್ ಖಾದರ್, ಮುಹಮ್ಮದ್ ಸುಹೈಲ್ ಸಖಾಫಿ, ನೌಫಲ್ ಸಖಾಫಿ, ಮಸೀದಿ ಅಧ್ಯಕ್ಷರಾದ ಅಬ್ದುಲ್ ಜಲೀಲ್, ಉಪಾಧ್ಯಕ್ಷ ವಿ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ, ಟಿಕೆ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಅಬ್ದುಲ್ ರಜಾಕ್, ಕೋಶಾಧಿಕಾರಿ ಅಬ್ದುಲ್ ನಾಸಿರ್, ಇಕ್ಬಾಲ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು.
Kshetra Samachara
08/10/2022 10:09 pm