ಮುಲ್ಕಿ:ಗ್ರಾಮೀಣ ಜನರು ಕೃಷಿ ಬದುಕಿನಲ್ಲಿ ಉತ್ತಮ ಆರೋಗ್ಯ, ಸಮೃದ್ದ ಜೀವನ ಪದ್ಧತಿಯನ್ನು ಕಟ್ಟಿ ಕೊಂಡಿದ್ದಾರೆ ಇದ್ದಕ್ಕೆ ಕೆಸರಿನೊಂದಿಗಿನ ಜೀವನ ಕಾರಣವಾಗಿದೆ ಎಂದು ಮುಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ 2 ನೇ ವರ್ಷದ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಮಾತನಾಡಿದರು. ದೇವಸ್ಥಾನ ಅರ್ಚಕ ನಾಗ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ತಾ. ಪಂ . ಮಾಜಿ ಸದಸ್ಯ ದಿವಾಕರ ಕರ್ಕೇರಾ, ಎಳತ್ತೂರು ಶ್ರೀ ಮಹಮ್ಮಾಯೀ ದೇವಸ್ಥಾನ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು, ಸುಕೇಶ್ ಶೆಟ್ಟಿ , ಮಹಿಳಾ ಮಂಡಳಿಯ ಅಧ್ಯಕ್ಷೆ ಮೀರಾ ಶೆಟ್ಟಿ , ಎಳತ್ತೂರು ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಎಳತ್ತೂರು ಮತ್ತಿತತರು ಉಪಸ್ಥಿತರಿದ್ದರು. ಶಶಿಕಾಂತ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
26/06/2022 06:30 pm