ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ವತಿಯಿಂದ ಮಕ್ಕಳಿಗೆ ಹಾಗೂ ಪರಿಸರಾಕ್ತರಿಗೆ ತಿಂಗಳಿಗೊಂದು ದಿನ ಆಯೋಜಿಸಲಾದ ಪ್ರಕೃತಿ ನಡಿಗೆ ಕಾರ್ಯಕ್ರಮದಲ್ಲಿ ಗಿಡಗಳ ಬಗ್ಗೆ ಪಿಲಿಕುಳ ಔಷಧೀಯವನದ ಮೇಲ್ವಿಚಾರಕರಾದ ಉದಯ ಕುಮಾರ ಶೆಟ್ಟಿ ಮಾಹಿತಿಗಳನ್ನು ನೀಡುತ್ತ ಸಾಗಿದರು.
ಬೆಟ್ಟದ ನೆಲ್ಲಿಕಾಯಿ ಶ್ರೇಷ್ಟವಾದುದು. ಕಿಡ್ನಿ ಲಿವರ್ ಗೆ ಔಷಧಿ. ವೀರ್ಯ ಹೆಚ್ಚಳಕ್ಕೆ ಉಪಯೋಗಿ. ಗಿಜಿಗಿಜಿ ಗಿಡ ಚಿಟ್ಟೆಗಳಿಗೆ ಆಶ್ರಯತಾಣ. ಸರ್ಪವಿಷಗಳಿಗೆ ಬಳಸುತ್ತಾರೆ ಎನ್ನುತ್ತಾರೆ. ಹಾಳೆ ಮರ ಸಪ್ತವರ್ಣಿಯೆಂದು ಕರೆಯುತ್ತಾರೆ. ಆಟಿ ಅಮಾವಾಸೆಗೆ ಕಷಾಯಕ್ಕೆ ಬಳಸುತ್ತಾರೆ. ಈ ಮರ ಇದ್ದಲ್ಲಿ ಸಿಡಿಲು ಬಡಿಯುವುದಿಲ್ಲ ಎಂಬ ನಂಬಿಕೆ ಇದೆ. ಮುತ್ತುಗ ಅಂದರೆ ಪಾಲಾಶ ಹೋಮಕ್ಕೆ ಬಳಸುತ್ತಾರೆ. ಎಲೆಯನ್ನು ಊಟಕ್ಕೂ ಬಳಸುತ್ತಾರೆ. ಚರ್ಮ ದೋಷಕ್ಕೆ ಪರಿಹಾರ. ಇದು ಎರಡು ಬೀಜ ಬಿಟ್ಟರೆ ಮಳೆಯ ಲಕ್ಷಣ ಹೇಳುತ್ತಾರೆ. ಆಕ್ಸಿಜನ್ ಕೊಡುವ ಇದು ಋತುಮತಿ ಆಗದವರಿಗೆ ಮದ್ದಿಗೂ ಉಪಯೋಗಿ ಹೀಗೆ ಉದಯಕುಮಾರ ಶೆಟ್ಟಿ ಮಾಹಿತಿಗಳನ್ನು ಅವರೊಂದಿಗೆ ಸಾಗುತ್ತಿದ್ದ ವಿದ್ಯಾರ್ಥಿಗಳು ದಾಖಲಿಸಿಕೊಂಡರು.
ಹೂವು ಎಲೆಗಳ ಪೋಟೋ ಕ್ಲಿಕ್ಕಿಸಿಕೊಂಡರು. ಮಾಹಿತಿ ಬರೆದುಕೊಂಡರು. ಸೈಂಟಿಫಿಕ್ ಹೆಸರು ಕೇಳಿ ತಿಳಿದುಕೊಂಡರು.
ನೂರಾರು ಸಸ್ಯ ಪ್ರಬೇಧಗಳನ್ನು ನಾವು ನಾಶಮಾಡಿದ್ದೇವೆ. ಒಂದು ದಿನ ಪ್ರಕೃತಿ ಮುನಿದು ನಮ್ಮ ನಾಶಕ್ಕೆ ಕಾರಣವಾಗುವ ಮುನ್ನ ಎಚ್ಚೆತ್ತುಕೊಂಡು ಮರಗಿಡಗಳನ್ನು ಉಳಿಸಿ ಸಹಸ್ರಾರು ನಮೂನೆಯ ಕ್ರಿಮಿಕೀಟ ಚಿಟ್ಟೆ ಹಕ್ಕಿ ಪ್ರಾಣಿಗಳಂತಹ ಜೀವಿಗಳಿಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಉದಯಕುಮಾರ ಶೆಟ್ಟಿ ಹೇಳಿದರು.
ಪ್ರೌಢಶಾಲೆಯ ಶಿಕ್ಷಕ ರಾಜಶೇಖರ್, ಉಪನ್ಯಾಸಕರಾದ ಶ್ರೀಮತಿ ಸುಜಯ ಭಟ್, ನಿಶ್ಮಿತಾ, ಹಳೆವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಡಾ. ಗುರುರಾಜ ಉಡುಪ, ಪ್ರಶಾಂತ್, ನವೀನ್ ಕುಮಾರ್ ಮುಂತಾದವರಿದ್ದರು.
Kshetra Samachara
26/06/2022 05:46 pm